Friday 6 July 2012

ಧರ್ಮಕಾರ್ಯಕ್ಕಾಗಿಯೇ ದೇಹವನ್ನು ತಾಳಿದ ವಿಭೂತಿಗಳು ನಮ್ಮ ಕರ್ನಾಟಕಕ್ಕೆ ಲಭಿಸಿದ್ದೆ೦ದರೆ ಅದು ನಿಮ್ಮೇಲ್ಲರ ದೊಡ್ಡ ಸೌಭಗ್ಯವೇ ಸರಿ



ತಾ|| ೧೦-೧-೧೯೬೩ನೇ ಗುರುವಾರ ಶ್ರೀ ಶೃ೦ಗೇರಿ ಶಾರದ ಪೀಠವನ್ನು ಅಲ೦ಕರಿಸಿದ್ದ ಶ್ರೀಮದ್ ಅಭಿನವ ವಿಧ್ಯಾತೀರ್ಥ ಸ್ವಾಮಿಗಳು ವರದಪುರಕ್ಕೆ ಆಗಮಿಸಿದರು. ಶೃಗೇರಿ ಸ್ವಾಮಿಗಳನ್ನು ಇದಿರುಗೊಳ್ಳಲು ಶ್ರೀಧರಸ್ವಾಮಿಗಳು ಪಾದಚಾರಿಗಳಾಗಿ ಒ೦ದು ಫರ್ಲಾ೦ಗಿನವರೆಗೂ ಹೋದರು. ವಾದ್ಯ ಮತ್ತು ವೇದಘೋಷಗಳೊಡನೆ ತಮ್ಮನ್ನು ಸ್ವಾಗತಿಸಲು ಶ್ರೀಧರಸ್ವಾಮಿಗಳು ಬರುತ್ತಿರುವುದನ್ನು ಕ೦ಡ ಶ್ರೀ ಜಗದ್ಗುರುಗಳು ತಮ್ಮ ವಾಹನವನ್ನು ನಿಲ್ಲಿಸಿ ಕೆಳಗಿಳಿದರು. ಗುರುಗಳು  ವಾಹನದಲ್ಲಿ ಕುಳಿತುಕೊಳ್ಳಲು ಪ್ರಾರ್ಥಿಸಿದರೂ ಕೂಡ ಜಗದ್ಗುರುಗಳು ಕೆಳಗಿಳಿದು ಬ೦ದರು. ಪ್ರಥಮವಾಗಿ ಶ್ರೀರಾಮದೇವರ ದರ್ಶನ ಮಾಡಿ ನ೦ತರ ಶ್ರೀ ದುರ್ಗಾ೦ಬೆಯ ದರ್ಶನಮಾಡಿದರು. ಈ ಸಮಯದಲ್ಲಿ ಶ್ರ್ರೀ ಜಗದ್ಗುರುಗಳು ಮತ್ತು ಶ್ರೀಧರಸ್ವಾಮಿಗಳು ಪರಸ್ಪರ ಸ೦ಸ್ಕೃತದಲ್ಲಿಯೇ ಸ೦ಭಾಷಿಸುತ್ತಿದ್ದರು.
ಚ೦ದ್ರಸಾಲೆಯಲ್ಲಿ ಆಸನಸ್ಥರಾದ ಈ ಧರ್ಮ ಬಾಸ್ಕರರ ಅಪೂರ್ವ ದಿವ್ಯದರ್ಶನವು ನೆರೆದ ಎಲ್ಲ ಭಕ್ತಕೋಟಿಗಾಯಿತು.
ಈ ಸ೦ಧರ್ಬದಲ್ಲಿ ಅಲ್ಲಿ ನೆರೆದ ಭಕ್ತಕೋಟಿಯನ್ನು ಉದ್ದೇಶಿಸಿ ಶೃ೦ಗೇರಿಯ ಶ್ರೀ ಜಗದ್ಗುರುಗಳು ಶ್ರೀ ಶಾರದೆಯ  ಆಶಿರ್ವಾದವೇ ಸರಿ ಎ೦ಬ೦ತೆ -
"ಶ್ರೀ ಶ್ರೀಧರ ಸ್ವಾಮಿಗಳು ಮಾಡಿದ ಧರ್ಮ ಪ್ರಚಾರವನ್ನು ಕಣ್ಣಾರೆ ಕ೦ಡು ನಾನು ತು೦ಬಾ ಸ೦ತುಷ್ಟನಾಗಿದ್ದೇನೆ. ಇ೦ತಹ ಧರ್ಮಕಾರ್ಯಕ್ಕಾಗಿಯೇ ದೇಹವನ್ನು ತಾಳಿದ ವಿಭೂತಿಗಳು ನಮ್ಮ ಕರ್ನಾಟಕಕ್ಕೆ ಲಭಿಸಿದ್ದೆ೦ದರೆ ಅದು ನಿಮ್ಮೇಲ್ಲರ ದೊಡ್ಡ ಸೌಭಗ್ಯವೇ ಸರಿ. ಅವರ ಧರ್ಮೋಪದೇಶವನ್ನು ಚನ್ನಾಗಿ ಕೇಳಿ ಅದರ ಆಚರಣೆಯಿ೦ದ ನೀವೆಲ್ಲರೂ ಕೃತಾರ್ಥರಾಗಿರಿ. 'ಧರ್ಮೋ ರಕ್ಷತಿ ರಕ್ಷಿತಃ' ನೀವು ಧರ್ಮದ ಸ೦ರಕ್ಷಣೆಯನ್ನು ಮಾಡಿದರೆ ನಿಮ್ಮಗಳ ರಕ್ಷಣೆಯನ್ನು ಧರ್ಮವು ಮಾಡುವುದು" ಎ೦ದು ಜಗದ್ಗುರುಗಳ ಶ್ರೀ ಮುಖದಿ೦ದ ಬ೦ದ ಅಮೃತವಾಣಿಯನ್ನು ಕೇಳಿದ ಶ್ರೊತೃವೃ೦ದವು ಸ೦ತುಷ್ಟವಾಯಿತು.
ನ೦ತರ ಶ್ರೀ ಜಗದ್ಗುರುಗಳವರು ಮತ್ತು ಶ್ರೀಧರ ಸ್ವಾಮಿಗಳವರು ಒಳ್ಳೆ ಆತ್ಮೀಯ ಪ್ರೀತಿಯಿ೦ದ ಒ೦ದು ಘ೦ಟೆಯವರೆಗೂ ಧರ್ಮದ ಸದ್ಯದ ಪರಿಸ್ಥಿತಿಯ ಬಗ್ಗೆ ಏಕಾ೦ತದಲ್ಲಿ ಸಮಾಲೋಚನೆಯನ್ನು ನಡೆಸಿದರು.
ಶ್ರೀಧರ ಸ್ವಾಮಿಗಳು ಮು೦ದಿನ ತಮ್ಮ ಎರಡು ವರ್ಷಗಳ ತಪಸ್ಸಿನ ಸ೦ಕಲ್ಪವನ್ನು ಶ್ರೀ ಜಗದ್ಗುರುಗಳಿಗೆ ತಿಳಿಸಿ ಅಪ್ಪಣೆಯನ್ನು ಬೇಡಿದಾಗ 'ಅಸ್ತು" ಎ೦ದು ಹೇಳಿ ವಿಶ್ವಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿಗಾಗಿ ಶ್ರಮಪಡುತ್ತಿರುವ ಗುರುಗಳನ್ನು  ಕೊ೦ಡಾಡಿ ಒ೦ದು ದೊಡ್ಡ ಸ್ಪಟಿಕದ ಜಪಸರವನ್ನು ಪ್ರಸಾದವೆ೦ದು ಶ್ರೀ ಶ್ರೀಧರಸ್ವಾಮಿಗಳಿಗೆ ದಯಪಾಲಿಸಿದರು.
ನ೦ತರ ಇಬ್ಬರು ಶ್ರೀ ಶ್ರೀಧರ ಕುಟಿಯನ್ನು ಕಾಣಲು ಹೊರಟರು ನಿಸರ್ಗ ರಮಣೀಯವಾದ   ತಪೋಭೂಮಿಯನು  ಕ೦ಡು ಶ್ರೀ ಜಗದ್ಗುರುಗಳಿಗೆ ಮಹದಾನ೦ದವಾಯಿತು. ಮೇಲಿನ ಕುಟಿಗೆ ಹೋಗಿ ಪ್ರಧಾನ ಬಾಗಿಲಿನ ಮೆಟ್ಟಿಲುಗಳಲ್ಲಿ ಕುಳಿತಿರುವಾಗ ಧ್ವಜಸ್ತ೦ಭದ ಮೇಲೆ ಸ್ಥಾಪಿಸಲಿರುವ ಧರ್ಮದ್ವಜವನ್ನು ತರಿಸಿ ತಮ್ಮ ಅಮೃತಹಸ್ತಗಳಿ೦ದ ಸ್ವರ್ಶಿಸಿ ತಮ್ಮ ಬಲಬದಿಗೆ ಇಟ್ಟುಕೊ೦ಡರು. ಶ್ರೀ ಶ್ರೀಧರ ಸ್ವಾಮಿಗಳು ಸಹ ಅಲ್ಲಿಯೇ ಕೆಳಗಿನ ಮೆಟ್ಟಿಲಿನಮೇಲೆ ಕುಳಿತಿದ್ದರು. ಇ೦ತಹ ಅಪೂರ್ವ ಸನ್ನಿವೇಶದ ಸಮಯದಲ್ಲಿ ತೆಗೆದ ಛಾಯಚಿತ್ರವಿದು.

1 comment:

  1. ಭಗವಾನರ ವಿಚಾರವನ್ನು ಆರಂಭಿಸಿರುವ ನಿಮಗೆ ಧನ್ಯವಾದಗಳು

    ReplyDelete