Monday 16 July 2012

ರಾಮಾಯಣ ಅಂದರೆ.......

ಮುಕುಂದೂರು ಸ್ವಾಮಿಗಳು ಉಪಯೋಗಿಸುತ್ತಿದ್ದ  ಭಾವಿ
 ರಾಮಾಯಣ ಅಂದರೆ ಮುಗಿಯದ ಕಥೆ ಎಂಬರ್ಥದಲ್ಲಿ ಆಡು ಮಾತಿನಲ್ಲಿ ಬಳಸುತ್ತಾರೆ. ಈ ಚರ್ಚೆಯೂ ಅದೇ ರೀತಿ ಮುಂದುವರೆದಿದೆ. ಅವಧೂತ ಮುಕುಂದೂರು ಸ್ವಾಮಿಗಳು ರಾಮಾಯಣದ ಪಾತ್ರಧಾರಿಗಳನ್ನು ವಿವರಿಸಿದ್ದು ಹೀಗೆ: ದಶರಥ: ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳನ್ನು ಸೇರಿಸಿ ರಥ ಮಾಡಿಕೊಂಡು ಸವಾರಿ ಮಾಡಿದವನು. ಇವುಗಳನ್ನು ಸ್ವಾಧೀನ ಪಡಿಸಿಕೊಂಡವನಿಗೆ ಸಿಗುವುದು ಆನಂದ, ಅದೇ ರಾಮ. ಮನಾನಂದ, ಆತ್ಮಾನಂದ, ಬ್ರಹ್ಮಾನಂದರೇ ಅವನ ತಮ್ಮಮದಿರಾದ ಲಕ್ಷ್ಮಣ, ಭರತ, ಶತೃಘ್ನ. ಜನಕ ರಾಜ ಋಷಿಯಂತೆ ಸಾಧಕ, ಅವನಿಗೆ ಸಿಕ್ಕಿದ್ದು ಜ್ಞಾನಾಂಬಿಕೆ ಸೀತೆ. ರಾಮ-ಸೀತೆ ಸೇರಿ ಆನಂದ-ಜ್ಞಾನ ಸೇರಿ- ಜ್ಞಾನಾನಂದ ಮೂಡಿತು. ಜಗತ್ತಿನ ಐಶ್ವರ್ಯದ ಆಸೆ ಎಂಬ ಮಾಯಾಮೃಗವನ್ನು ಜ್ಞಾನದ ಕೋರಿಕೆಯಂತೆ ಆನಂದ ಸಂಹರಿಸಿದ. ದಶರಥ ಹತ್ತು ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ಸವಾರಿ ಮಾಡಿದರೆ ರಾವಣ ತಲೆ ಮೇಲೆ ಅವನ್ನು ಕೂರಿಸಿಕೊಂಡ. ಅಂದರೆ ಅವನು ಇಂದ್ರಿಯಗಳ ದಾಸನಾಗಿದ್ದ. ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿ ಷಡ್ವರ್ಗಗಳು ಸೇರಿ ಅವನಿಗೆ ಇಪ್ಪತ್ತು ಕೈಗಳು. ಈ ಇಪ್ಪತ್ತು ಸಂಗತಿಗಳನ್ನು ಹೊತ್ತವರಿಗೆ ಜ್ಞಾನಾಂಬಿಕೆ ಒಲಿದಾಳೇ, ಸಿಕ್ಕಾಳೇ? ಅಶೋಕವನದಲ್ಲಿದ್ದವಳಿಗೆ ಶೋಕವೆಲ್ಲಿ? ಸುಗ್ರೀವ ಅಂದರೆ ಒಳ್ಳೆ ತಲೆ, ಒಳ್ಳೆ ಯೋಚನೆಗಳು. ರಾವಣ ಅನ್ನುವ ಅಹಂಕಾರ, ಮಮಕಾರಗಳನ್ನು ಕತ್ತರಿಸಿದರೆ ಒಳ್ಳೆ ಮನಸ್ಸು, ದೃಷ್ಟಿ, ಬ್ರಹ್ಮಜ್ಞಾನ, ಎಲ್ಲಾ ಸಿಕ್ಕಿ ಆನಂದ (ರಾಮ) ಸಿಗುತ್ತೆ. ಜನ ಪುರಾಣ ೋದಿ ಹೊರಗೇ ತಿಳಕೊಂಡು ಹೊರಗೇ ಆಟ ಆಡ್ತಾರೆ. ಒಳಗಿನ ತಿರುಳು ತಿಳಿದಾಗಲೇ ಅದರ ಮಹತ್ತು ಸಿಗೋದು. ಅದನ್ನು ಅನುಭವಿಸಬೇಕು.
-ಕವಿ ನಾಗರಾಜ್

1 comment:

  1. ತುಂಬಾ ಸೊಗಸಾದ ವಿವರಣೆ.
    ಸ್ವರ್ಣಾ

    ReplyDelete