Saturday 7 July 2012

ಗುರುಪೌರ್ಣಮಿಯದಿನ (03-07-2012) ಜೋದ್ ಪುರದ ಗುರುಭಕ್ತರೊಬ್ಬರ ಮನೆಯಲ್ಲಿ ಶ್ರೀ ಶ್ರೀಧರಸ್ವಾಮಿಗಳ ಪಾದುಕೆಗಳಿಗೆ ಪಾದಪೂಜೆಯನ್ನು ಮಾಡಿದ ನ೦ತರ ಪಾದುಕೆಗಳನ್ನು ಇರಿಸಿದ್ದ ತಟ್ಟೆಯಲ್ಲಿ ಕ೦ಡುಬ೦ದ ಪಾದಗಳ ಗುರುತು.




ಮತ್ತೊಂದು ಘಟನೆ:
ಇದೇ ರೀತಿಯ ನಾನು ಕೇಳಿದ  ಒಂದು ಘಟನೆ ತಿಳಿಸಬಯಸುವೆ. ಶ್ರೀಧರ ಸ್ವಾಮಿಗಳನ್ನು ಪಾದಪೂಜೆಗಾಗಿ ಭಕ್ತರೊಬ್ಬರು ಆಹ್ವಾನಿಸಿರುತ್ತಾರೆ. ಪಾದಪೂಜೆ ಎಲ್ಲಾ ಮುಗಿದು ತೀರ್ಥ ಕೊಡುವ ಸಮಯ. ಮನೆಯ ಒಡತಿಯ ಕಣ್ಣಲ್ಲಿ ನೀರು ಕಂ ಭಗವಾನರು"ಯಾಕಮ್ಮಾ ಕಣ್ಣಲ್ಲಿ ನೀರು?" ಎನ್ನುವರು
-ಸ್ವಾಮಿ, ಕಾಶಿಯಲ್ಲಿ ಓದುತ್ತಿರುವ ನನ್ನ ಮಗ ಈ ಸಂದರ್ಭದಲ್ಲಿ ನಮ್ಮ ಮನೆಯಲ್ಲಿರಬಾರದಿತ್ತೇ? ಎಂದು ಅವನ ನೆನಪಲ್ಲಿ ಕಣ್ಣಲ್ಲಿ ನೀರು ಬಂತು.
-ಅದಕ್ಕೇನಂತೆ ಅವನಿಗೂ ತೀರ್ಥ ಕೊಡುವೆ ,ಆನಂತರವೇ ನೀವು ತೆಗೆದುಕೊಳ್ಳಿ, ಎಂದು ಆ ತಾಯಿಗೆ ಸಮಾಧಾನಹೇಳಿ   ಒಂದು ಉದ್ಧರಣೆ ತೀರ್ಥವನ್ನು  ಪಕ್ಕದಲ್ಲಿದ್ದ ತಟ್ಟೆಯಲ್ಲಿ ಹಾಕಿ ಅವನು ತೆಗೆದು ಕೊಂಡಿದ್ದಾನೆ, ಈಗ ನೀವು ತೆಗೆದುಕೊಳ್ಳಿ ಎನ್ನುತ್ತಾರೆ.
ಈ ತಾಯಿ ತೀರ್ಥ ತೆಗೆದುಕೊಳ್ಳುವರು
ನಾಲ್ಕು ದಿನ ಕಳೆಯುತ್ತೆ. ಮಗನಿಂದ  ತಾಯಿಗೆ ಒಂದು ಪತ್ರ ಬರುತ್ತದೆ. ಪತ್ರದಲ್ಲಿ........
ಮಾ||ಶ್ರೀ|| ತಾಯಿಯವರಿಗೆ ಸಾಸ್ಟಾಂಗ ನಮಸ್ಕಾರಗಳು. ಒಂದು  ಪರಮಾಶ್ಚರ್ಯ ಸಂಗತಿ ತಿಳಿಸಲು ನಿಮಗೆ ಈ ಪತ್ರ ಬರೆಯುತ್ತಿರುವೆ. ವಿಶ್ವನಾಥನ ದರ್ಶನಕ್ಕೆಂದು ಮೊನ್ನೆ ಹೋಗಿದ್ದೆ. ವಿಶ್ವನಾಥನ ದರ್ಶನ ಮಾಡಿ ತೀರ್ಥ       ತೆಗೆದುಕೊಳ್ಳುವಾಗ ನನ್ನ ಕೈಗೆ ಪಂಚಾಮೃತ ತೀರ್ಥ ಬಿತ್ತು, ಆದರೆ ಅಲ್ಲಿ ಕೊಡುತ್ತಿದ್ದುದು ನೀರು ತೀರ್ಥ ಮಾತ್ರ!! ಅಲ್ಲಿದ್ದ ಎಲ್ಲರಿಗೂ ಪರಮಾಶ್ಚರ್ಯ ವಾಯ್ತು.!!
ಭಗವಾನರು  ಇಲ್ಲಿ ತಟ್ಟೆಯಲ್ಲಿ ಹಾಕಿದ ತೀರ್ಥ ಕಾಶಿವಿಶ್ವನಾಥನ ತೀರ್ಥವಾಗಿ ಅದೇ ಸಮಯದಲ್ಲಿ ಮಗನ ಕೈ ಸೇರಿರುತ್ತದೆ!!
ಇಂತಹ  ಅಚ್ಚರಿಯ ಘಟನೆಗಳು ಅದೆಷ್ಟೋ!!
ನಾವು ಸಾಮಾನ್ಯರು. ನಾವು ಎಲ್ಲವನ್ನೂ  ನಮ್ಮ ಕಣ್ ಅಳ ತೆಗೆ ನೋಡುತ್ತೇವೆ. ಆದರೆ  ಸಿದ್ಧ ಪುರುಷರು ಏನು    ಬೇಕಾದರೂ ಮಾ  ಬಲ್ಲರು. ಒಂದೇ ವೇಳೆ ಹತ್ತಾರು ಕಡೆ ದರ್ಶನ ಕೊಟ್ಟ   ಮಹಾತ್ಮರು ಗಳಿದ್ದಾರೆ.  ಕಳೆದ ಶನಿವಾರ ನಮ್ಮೂರಿನಲ್ಲಿದ್ದರು, ಎಂದು ಒಬ್ಬ ಭಕ್ತ ಹೇಳಿದರೆ , ಇಲ್ಲಾ...ಇಲ್ಲಾ...ನಮ್ಮೂರಿನಲ್ಲಿದ್ದರು, ಎಂದು ಮತ್ತೊಬ್ಬರು , ಇಲ್ಲಾ ಸ್ವಾಮಿ   ಅಂದು ನಮ್ಮೂರಿನಲ್ಲಿ ಪಾದಪೂಜೆ ಮಾಡಿದ್ದೇವೆ! ಎಂದು  ಮಗದೊಬ್ಬರು ಹೇಳಿದರೆ!!! ಇದೆಲ್ಲಾ ಸಾಧ್ಯ ,ನಮಗಲ್ಲಾ,  ಭಗವಾನರಂತವರಿಗೆ!! ಅದನ್ನು ಅವರು ಪ್ರಚಾರ ಮಾಡುವುದೇ ಇಲ್ಲ. ಭಕ್ತರು ಬಯಸಿದಲ್ಲಿ ದರ್ಶನ ಕೊಡುತ್ತಾರೆ!! ಜನರು ಅಚ್ಚರಿ ಪಡುತ್ತಾರೆ, ಅಷ್ಟೆ!
-ಹರಿಹರಪುರಶ್ರೀಧರ್

1 comment:

  1. ಇನ್ನೂ ಸ್ವಲ್ಪ ವಿವರಣೆ ಕೊಡ ಬಹುದೇ?

    ReplyDelete