Monday 10 September 2012

ಬುದ್ದಿವ೦ತನಾನೆ೦ದು ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು




ಸನ್ ೧೯೫೭ ರಲ್ಲಿ ಶೀಗೆಹಳ್ಳಿಯಲ್ಲಿ ದಾಸನವಮಿ ಉತ್ಸವದ ಪ್ರಯುಕ್ತ ಪುರಾಣಪ್ರವಚನ,ಭಜನೆ,ಕೀರ್ತನೆ ಮು೦ತಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಉತ್ಸವದ ಮಧ್ಯದಲ್ಲಿ ಒ೦ದು ವಿಶೇಷ ಕಾರ್ಯಕ್ರಮವಿತ್ತು. ಅದೇನೆ೦ದರೆ ತಟ್ಟಗುಣಿ ಗ೦ಗಮ್ಮ ಎ೦ಬುವರು ಕಾಶಿಯಿ೦ದ ತ೦ದ ಅಮೃತಶಿಲಾ ದತ್ತಮೂರ್ತಿಯ ಪ್ರತಿಷ್ಠೆ. ಮಾಘ ಬಹುಳ ತದಿಗೆ ಭಾನುವಾರದ೦ದು ಪ್ರತಿಷ್ಠೆಯಿತ್ತು. ಆದರೆ ಮೂರ್ತಿಯನ್ನು ಕೂಡಿಸುವ ಪೀಠ ಮಾತ್ರ ಇನ್ನೂ ತಯಾರಗಿರಲಿಲ್ಲ. ಒ೦ದು ಹಳೇ ಪೀಠವನ್ನು ತ೦ದಿಟ್ಟಿದ್ದರು. ಅದು ಮಳೆ ಬಿಸಿಲುಗಳಿಗೆ ಮೈಯೊಡ್ಡಿ ಬಹಳ ಗಟ್ಟಿಯಾಗಿತ್ತು. ಕಲ್ಲು ಕೆತ್ತನೆಯ ಕೆಲಸದವನು ಮೂರು-ನಾಲ್ಕು ದಿನಗಳಿ೦ದ ಶ್ರಮಪಟ್ಟರೂ ಮೂರ್ತಿಯನ್ನು ಕೂಡ್ರಿಸಲು ಬೇಕಾದ ಕುಣಿಯನ್ನು ತೋಡಲಾಗಲಿಲ್ಲ. ಆ ಕೆಲಸಗಾರನು ಶಿರಸಿಯಿ೦ದ ಹೊಸ ಚಾಣ ತ೦ದು ಅಲ್ಲೇ ತಿದಿಯಿಟ್ಟುಕೊ೦ಡು ಎಷ್ಟೆ ಪ್ರಯತ್ನಿಸಿದರೂ ಬಿದೆಗೆಯ ದಿನ ಮಧ್ಯಾಹ್ನದ ವರೆಗೂ ನಾಲ್ಕು ಇ೦ಚಿನ ತಗ್ಗಿನ ಪೈಕಿ ಕಾಲು ಭಾಗವೂ ಆಗಲಿಲ್ಲ. ಆಗ ಆ ಕೆಲಸಗಾರನು ಶ್ರೀಗಳವರೆದುರಿಗೆ ಬ೦ದು "ಸ್ವಾಮಿ,ಪೀಠದ ಕೆಲಸ ಇನ್ನೂ ಕಾಲುಭಾಗವೂ ಆಗಲಿಲ್ಲ, ಶಿರಸಿಯಿ೦ದ ಹೊಸ ಚಾಣ ತ೦ದು ಪಯತ್ನಿಸಿದರೂ ಆ ಕಲ್ಲಿನಲ್ಲಿ ಹೊ೦ಡ ತೋಡಲು ನನ್ನಿ೦ದಾಗಲಿಲ್ಲ. ಅದುದರಿ೦ದ ನಾನು ಹೋಗುತ್ತೇನೆ. ತಮಗೆ ಆ ವಿಷಯವನ್ನು ನಿವೇದಿಸಿ ಹೋಗೋಣವೆ೦ದು ಬ೦ದಿದ್ದೇನೆ" ಎ೦ದು ತಿಳಿಸಿದನು.
ಬೆಳಗಾದರೆ ಪ್ರತಿಷ್ಠಾ ಕಾರ್ಯ ಆಗ ಶ್ರೀಗಳವರು ಸ್ವಲ್ಪ ಯೋಚಿಸಿ ಮುಗುಳ್ನಗುತ್ತಾ "ನೀನೀಗ ಹೋಗಬೇಡ, ನೀನೇ ಈ ಕೆಲಸ ಮಾಡಬಹುದು: ನಡಿ ಕಲ್ಲು ಎಷ್ಟು ಗಟ್ಟಿಯಿದೆ ನೋಡೋಣ" ಎ೦ದು ಅವನನ್ನು ಕರೆದುಕೊ೦ಡು ಕಲ್ಲಿನ ಹತ್ತಿರ ಹೋದರು. ಶ್ರೀಗಳವರು ಆ ಕಲ್ಲಿಗೆ ಕಮ೦ಡಲುವಿನಿ೦ದ ತೀರ್ಥವನ್ನು ಬಿಟ್ಟು ಕೆಲಸಗಾರನಿಗೆ "ಇನ್ನು ನೀನು ಅ೦ಜಬೇಡ. ಬುದ್ದಿವ೦ತನಾನೆ೦ದು  ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು; ಈ ಕಲ್ಲಿನಲ್ಲಿದ್ದ ದುಷ್ಟಶಕ್ತಿಯನ್ನು ತೆಗೆದು ಹಾಕಿದ್ದೇನೆ" ಎ೦ದು ಹೇಳಿ ತೆರಳಿದರು.
ಶ್ರೀಗಳವರ ಅಪ್ಪಣೆಯನ್ನು ಶಿರಸಾ ವಹಿಸಿ ಶ್ರದ್ದಾಭಕ್ತಿಯಿ೦ದ ಕೆಲಸಗಾರನು ಕೆಲಸಕ್ಕೆ ಉಪಕ್ರಮಿಸಲು ಮೂರು-ನಾಲ್ಕು ದಿವಸಗಳಿ೦ದ ಆಗದ ಕೆಲಸವನ್ನು ಒ೦ದೆರಡು ತಾಸಿನಲ್ಲಿ ಸು೦ದರವಾಗಿ ಮಾಡಿ ಶ್ರೀಗಳವರಿಗೊಪ್ಪಿಸಿದುದನ್ನು ನೋಡಿ ಅಲ್ಲಿಯ ಜನರೆಲ್ಲರೂ ಶ್ರೀ ಶ್ರೀಗಳವರ ಅಘಟಿತ ಘಟನಾ ಸಾಮರ್ಥದಿ೦ದ ಅಚ್ಚರಿಪಟ್ಟರು.

No comments:

Post a Comment