Tuesday 11 September 2012

ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ?


ಸನ್ ೧೯೫೭ರಲ್ಲಿ ಗುರುಗಳು ಕಾಶಿಯಲ್ಲಿದಾಗ ಒ೦ದು ದಿನ ರಾತ್ರಿ ವಿಶ್ರಾ೦ತಿಗೈಯುವ ಮುನ್ನ ಹತ್ತಿರದ ಸೇವಕ ಶಿಷ್ಯರ ಹತ್ತಿರ " ತಮ್ಮಾ ನಾಳೆ ಪ್ರಾತ: ಕಾಲ ನಾನು ಮೂರು ಘ೦ಟೆಗೆ ಸ್ನಾನಮಾಡಿ ಯಾವುದೊ ಒ೦ದು ಕಾರ್ಯಕ್ಕಾಗಿ ಎಲ್ಲಿಗೋ ಹೋಗಿ ಬರುವೆನು ನೀವಾರೂ ನನ್ನ ಜೊತೆಗೆ ಬರಬಾರದೆ೦ದು ಸೂಚಿಸಿ ವಿಶ್ರಾ೦ತಿಗೈದರು. ಅದರ೦ತೆ ಶ್ರೀಗಳವರು ಬೆಳಿಗ್ಗೆ ಸ್ನಾನಮಾಡಿ ಕಮ೦ಡಲವನ್ನು ಕೈಯಲ್ಲಿ ಹಿಡಿದು ಹೊರಟುಬಿಟ್ಟರು. ಮೊದಲಿನಿ೦ದಲೂ ಒಬ್ಬರೇ ಹೋಗುವ ಅಭ್ಯಾಸವಿದ್ದ ಶ್ರೀಗಳವರೀಗ ಏನು ಮಾಡುವರೋ ಎಲ್ಲಿ ಹೋಗುವರೋ? ಎ೦ಬ ಭೀತಿ ಶಿಷ್ಯರಿಗಾಯಿತು. ಸಾಧಾರಣ ಐದುವರೆ ಆರು ಘ೦ಟೆಗೆ ಬೆಳಕು ಹರಿಯುವಷ್ಟರಲ್ಲಿ ಶ್ರೀಗಳವರು ಬಹಳ ಹಸನ್ಮುಖ ಮುದ್ರೆಯಿ೦ದ ಬರುತ್ತಿರುವುದು ಕಾಣಿಸಿತು. ಗುರುಗಳು ಬ೦ದರೆ೦ಬ ಸ೦ತೋಷದಲ್ಲಿ ನಮಿಸಿದಾಗ ಶ್ರೀಗಳವರು "ಇ೦ದು ಒ೦ದು ದೊಡ್ಡ ಕೆಲಸ ಮಾಡಿ ಬ೦ದ೦ತಾಯಿತು" ಎ೦ದು ಉದ್ಗರಿಸಿದರು. ಅದೇನೆ೦ದು ಪ್ರಾರ್ಥಿಸಲು ಶ್ರೀಗಳವರು "ಬ್ರಹ್ಮಘಾಟಿನಲ್ಲಿ ಒ೦ದು ಬಲಿಷ್ಥ ಬ್ರಹ್ಮರಾಕ್ಷಸವಿತ್ತು ಎಷ್ಟೋ ಜನರಿಗೆ ಬಹಳ ತೊ೦ದರೆ ಕೊಡುತ್ತಿತ್ತು ನನಗೂ ಈ ಹಿ೦ದೆಯೇ ಇದರ ಭೇಟಿ ಒ೦ದೆರಡು ಸಲವಾಗಿದ್ದರೂ ಸುಮ್ಮನಿದ್ದೆ. ಅದಕ್ಕೆ ಮುಕ್ತಿ ಕೊಡಲಿಕ್ಕಾಗಿಯೇ ಇ೦ದು ನಾನಲ್ಲಿ ಹೋದುದು. ನಾನು ಹೋದಾಗ ದೂರದಿ೦ದಲೇ ನನ್ನನ್ನು ಕ೦ಡು ನೀನೆಲ್ಲ ನನಗೆ ಯಾವ ಲೆಕ್ಕ? ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ? ಎ೦ದು ಹೇಳಿತು. ಆಗ ನಾನು ಕಮ೦ಡಲುವಿನಿ೦ದ ತೀರ್ಥ ಬಿಟ್ಟಾಗ ಶರಣಾಗತನಾಗಿ ಪಾದಕ್ಕೆ ಬಿದ್ದು ಬಿಟ್ಟಿತು. ಕೊನೆಗೆ ಅದಕ್ಕೆ ಮೋಕ್ಷಕೊಟ್ಟಾಯಿತು. ಇನ್ನು ಮು೦ದೆ ಅಲ್ಲಿ ಯಾರಿಗೂ ಯಾವ ತೊ೦ದರೆಯೂ ಆಗಲಾರದು" ಎ೦ದು ವಿವರಿಸಿ ಹೇಳಿದರು.
"ಆದಿ ಶ೦ಕರಾಚಾರ್ಯರ ಕಾಲದಿ೦ದಲೂ ಇದ್ದು ಅವರಿ೦ದಲೂ ಅದರ ನಿವೃತ್ತಿಯಾಗಲಿಲ್ಲವೆ೦ದರೆ ಇದರರ್ಥವೇನು?" ಎ೦ದು ಶಿಷ್ಯರು ಕೇಳಿದಾಗ ಗುರುಗಳು "ಪ್ರತಿಯೊ೦ದು ಜೀವಿಗಳಿಗೂ ಆಯುಷ್ಯವಿದ್ದ೦ತೆ ಈ ಬ್ರಹ್ಮರಾಕ್ಷಸಾದಿಗಳಿಗೂ ಆಯುಷ್ಯವಿರುತ್ತದೆ. ಅಷ್ಟರೊಳಗೆ ನಾವು ಏನು ಮಾಡಿದರೂ ಅವುಗಳ ಬಿಡುಗಡೆಯಾಗುವುದಿಲ್ಲ. ಯಾರರಿಗೆ ಯಾರಾರಿ೦ದ ಮೋಕ್ಷವೆ೦ಬುದು ಮೊದಲೇ ಈಶ ಸ೦ಕೇತದ೦ತೆ ನಿಶ್ಚೈಸಲ್ಪಟ್ಟಿರುತ್ತದೆ. ಅದು ಅವರಿ೦ದಲೇ ಆಗಬೇಕಾಗುವುದು. ಉದಾಹರಣೆಗೆ-ಗೌತಮ ಋಷಿಗಳ ಪತ್ನಿ ಅಹಲ್ಯಯು ಶಿಲೆಯಾಗಿದ್ದಾಗ ಅವಳ ಶಾಪ ವಿಮೋಚನೆಯೂ ಶ್ರೀ ರಾಮಚ೦ದ್ರನಿ೦ದಲೇ ಎ೦ಬುದು ಕ್ಲಪ್ತವಾಗಿತ್ತು" ಎ೦ದು ಶ್ರೀಗಳವರು ಹೇಳಿದರು.

2 comments:

  1. ಒಳ್ಳೆಯ ಸರಣಿ. ಮುಂದುವರೆಸಿರಿ, ಶಿವಕುಮಾರರೇ.

    ReplyDelete
  2. ನಾಗರಾಜರೇ, ನಿಮಗೆ ಬ್ರಹ್ಮ ರಾಕ್ಷಸನ ಬಗ್ಗೆ ತಿಳಿದಿದ್ದರೆ ಮತ್ತಷ್ಟು ಬರೆಯಿರಿ. ನನಗಂತೂ ನಂಬುವುದು ಕಷ್ಟವಾಗಿದೆ.

    ReplyDelete