ಈ ಪುಣ್ಯಭೂಮಿಯು ಅದೆಷ್ಟು ಜನ ಸಿದ್ಧ ಪುರುಷರ, ಅವಧೂತರ, ಸಾದು ಸಂತರ ಪಾದ ಸ್ಪರ್ಷದಿಂದ ಪುನೀತ ವಾಗಿದೆಯೋ! ಅವರಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಮನುಷ್ಯನ ಕಣ್ಣಿಗೆ ಬೀಳುತ್ತಾರೆ. ಕೆಲವರನ್ನು ಜನರು ಗುರುತಿಸುತ್ತಾರೆ. ಕೆಲವರನ್ನು ಗುರುತಿಸುವುದೇ ಇಲ್ಲ! ಹಲವರನ್ನು ಸಮಾಜವು ಅವರ ಭೌತಿಕ ಶರೀರವು ಇಲ್ಲವಾದ ಮೇಲೆ ಗುರುತಿಸುತ್ತದೆ.ನನ್ನ ಕಣ್ಣಿಗೆ ಬಿದ್ದ ಕೆಲವರ ಕಿವಿಗೆ ಕೇಳಿದ ಕೆಲವರ ಬಗ್ಗೆ ಈ ಬ್ಲಾಗ್ ನಲ್ಲಿ ಬರೆಯಬೇಕೆಂಬ ಉದ್ಧೇಶದಿಂದ ಈ ಬ್ಲಾಗ್ ರಚಿಸಲಾಗಿದೆ.
Saturday, 11 August 2012
Monday, 6 August 2012
ಸಿಗರೇಟು ಹೇಳಿದ ಬುದ್ಧಿ
ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು. ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು. ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು. ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ ಹೇಳಬೇಕು" ಎಂದು ಸ್ವಲ್ಪ ಅಹಂಕಾರ ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ? ಇರಲಿ. ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು. ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.
" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ? ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ? ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು. ಆಕೆಗಂತೂ ದಿಕ್ಕೇ ತೋಚಲಿಲ್ಲ. ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು. ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ? ನಿನಗೆ ಗೊತ್ತಿಲ್ಲವೇ? ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ? ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು." ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು ಆ ಯಜಮಾನರ ಕಣ್ಣು ತುಂಬಿ ಬಂತು. ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.
ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ. ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ. ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು.
ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು. ಅವರ ಗುಣದೋಷಗಳನ್ನು ಸರಿಯಾದ ಸಮಯದಲ್ಲಿ ಎತ್ತಿ ಹಿಡಿದಿದ್ದರು. ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು. ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.
-H.N.ಪ್ರಕಾಶ್
-H.N.ಪ್ರಕಾಶ್
ಗೃಹಪ್ರವೇಶ
ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು. ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.
ಗುರುನಾಥರು : ಏನ್ಸಾರ್, ಬಂದಿದ್ದು?
ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.
ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ? ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.
ಗುರುಬಂಧು ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.
ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ? ಗಾರೆ ಕೆಲಸದವನು, ಲೈಟ್ ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ! ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ ಪ್ರಶ್ನೆ ಮಾಡಿದರು.
ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು ನಕ್ಕರು.
ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?"
ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.
ಗುರುನಾಥರು : " ಎಲ್ಲರನ್ನು ಕರೆದು ಊಟ ಹಾಕಬೇಕು! ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು.
ಗುರುಬಂಧು ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."
ಗುರುನಾಥರು " ಅಂದರೆ, ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.
ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ, ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.
ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ? ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ? ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ. ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.
ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು. ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು. ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ. ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ ಹೊರಟರು.
"ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು. ಅಲ್ಲವೇ ಸಾರ್? " ಎಂದರು ಗುರುನಾಥರು.
ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ. ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.
-H.N.ಪ್ರಕಾಶ್
-H.N.ಪ್ರಕಾಶ್
Sunday, 22 July 2012
ಕರ್ನಾಟಕದ ಎಲ್ಲಾ ಭಕ್ತವೃ೦ದಕ್ಕೆ ಆಶೀರ್ವಾದ,
೧೯೫೭ರಲ್ಲಿ ಶ್ರೀ ಶ್ರೀಧರಸ್ವಾಮಿಗಳು ಕಾಶಿಯಲ್ಲಿದ್ದಾಗ ಕರ್ನಾಟಕದ ಕೆಲವು ಭಕ್ತರು ಈ ವರ್ಷದ ಚಾತುರ್ಮಾಸ್ಯವು ವದ್ದಳ್ಳಿಯಲ್ಲಿಯೇ ಆಗಬೇಕೆ೦ದು ಬಿನ್ನವಿಸಿ ಶ್ರೀಗಳವರನ್ನು ಕರೆದೊಯ್ಯಲು ಕಾಶಿಗೆ ಬ೦ದಾಗ ಶ್ರೀಗಳವರು ಈ ವರ್ಷದ ಚಾತುರ್ಮಾಸ್ಯವು ಕಾಶಿಯಲ್ಲಿಯೇ ಮಾಡುವೆನೆ೦ದು ಹೇಳಿ ಕರ್ನಾಟಕದ ಎಲ್ಲಾ ಭಕ್ತರ ಸಮಾಧಾನಕ್ಕಾಗಿ ಒ೦ದು ದಿವ್ಯ ಆಶೀರ್ವಾದ ಸ೦ದೇಶವನ್ನು ದಯಪಾಲಿಸಿ, ಇದನ್ನು ಮುದ್ರಿಸಿ ಎಲ್ಲಾ ಭಕ್ತರಿಗೂ ಹ೦ಚುವ೦ತೆ ಹೇಳಿದರು. ಈ ಸ೦ದೇಶ ಚಿಕ್ಕದಾದರೂ ಇದರ ಮಹತ್ವ ಅಪಾರವಾಗಿದ್ದು ಇದರಲ್ಲಿ ಶ್ರೀಗಳವರ ಧ್ಯೇಯ ಧೋರಣೆ ಶ್ರೀಧರಾಶ್ರಮದ ಸ್ಥಿತಿಗತಿ, ಉದ್ದೇಶ ಹಾಗೂ ಭಕ್ತಾದಿಗಳೆಲ್ಲರ ಕರ್ತವ್ಯವನ್ನು ವಿಶದಗೊಳಿಸಿರುವರು.
ಮುಕ್ಕಾ೦;-ಶ್ರೀ ಕಾಶಿ,
ಹೇವಿಳ೦ಬ ಸ೦|| ಆಷಾಡ ಶುದ್ದ ೧೫,೧೯೫೭
ಕರ್ನಾಟಕದ ಎಲ್ಲಾ ಭಕ್ತವೃ೦ದಕ್ಕೆ ಆಶೀರ್ವಾದ,
ಸರ್ವೇ ಜನಾಃ ಸುಖಿನೋ ಭವ೦ತು
ಇತಿ ಶಿವಮ್
ಶ್ರೀಧರ ಸ್ವಾಮಿ
ಮುಕ್ಕಾ೦;-ಶ್ರೀ ಕಾಶಿ,
ಹೇವಿಳ೦ಬ ಸ೦|| ಆಷಾಡ ಶುದ್ದ ೧೫,೧೯೫೭
ಕರ್ನಾಟಕದ ಎಲ್ಲಾ ಭಕ್ತವೃ೦ದಕ್ಕೆ ಆಶೀರ್ವಾದ,
ನಿಮ್ಮೆಲ್ಲರ ಜೀವನ ಮ೦ಗಲಮಯವಾಗಲಿ. ನೀವೆಲ್ಲರೂ ಪವಿತ್ರ ಮತ್ತು ಆದರ್ಶ ವ್ಯಕ್ತಿಗಳಾಗಿರಿ. ನಿಮ್ಮ ಜೀವನದ ಎಲ್ಲ ಪರಿಸರಗಳಲ್ಲಿ ಮೂರ್ತಿಮ೦ತ ಧರ್ಮವು ನೆಲಸಿರಲಿ. ನಾನಿತ್ತ ಕಡೆಗೆ ಬ೦ದ ಮೇಲೆ ಇಮ್ಮಡಿ ಮುಮ್ಮಡಿ ಉತ್ಸಾಹಗೊ೦ಡು ದಕ್ಷತೆಯಿ೦ದ ಎಲ್ಲಾ ಕಾರ್ಯಗಳನ್ನೂ ನೆರವೇರಿಸುತ್ತ ಬನ್ನಿ. ಆ ನಿಮ್ಮ ಸತ್ಕಾರ್ಯದ ಕೀರ್ತಿಯೇ ನನ್ನನ್ನು ಸೆಳೆದು ಬರಮಾಡಿಕೊಳ್ಳುವುದೆ೦ಬುದು ನಿಜವಾದ ಮಾತು.
ಆಶ್ರಮದ ಸ್ಥಾಪನೆ ಮಾಡಿ ಬ೦ದಿದ್ದೇನೆ. ಪಾಠಶಾಲೆಯ(ಶ್ರೀ ಶ್ರೀಧರಸಾ೦ಗವೇದ ಪಾಠಶಾಲೆ) ಪ್ರಾರ೦ಭವಾಯಿತು. ಧರ್ಮದ ಆದರ್ಶ ಶಿಕ್ಷಣ ಸಿಕ್ಕಿ ಈ ಶಿಕ್ಷಣಸ೦ಸ್ಥೆ ಪೂರ್ಣ ಯಶಸ್ವಿಯಾಗಬೇಕು ವಿಶ್ವಮಾನ್ಯವಾಗಬೇಕು ಎ೦ಬುದು ನನ್ನ ಕೋರಿಕೆ. ಈ ಶಿಕ್ಷಣಸ೦ಸ್ಥೆಯಿ೦ದ ಅಧ್ಯಯನವನ್ನು ಪೂರ್ಣಪಡಿಸಿ ಹೊರಬಿದ್ದ ವಿಧ್ಯಾರ್ಥಿಗಳು ಧರ್ಮಸೂರ್ಯರಾಗಿ ವಿಶ್ವವನ್ನೆಲ್ಲ ಬೆಳಗಬೇಕು ಎ೦ಬುದಾಗಿ ನನ್ನ ಅ೦ತರಾಳದಲ್ಲಿ ಉದಯಸಿದ ದಿವ್ಯ ಸ೦ಕಲ್ಪವಿದು. ಜನರ ಎಲ್ಲಾ ಆಪತ್ತನ್ನು ಪರಿಹರಿಸಿ ಎಲ್ಲಾ ದಿವ್ಯಆನ೦ದ ಪ್ರಾಪ್ತಿಯನ್ನು ಮಾಡಿಕೊಟ್ಟು ಇಹಪರದ ಶಾ೦ತಸೌಖ್ಯವನ್ನು ನೀಡುವ ಅದೊ೦ದು ಪರಮಪವಿತ್ರ ಸ್ಠಳವಾಗುವುದಕ್ಕೆ ಒ೦ದು ದಿವ್ಯ ಧರ್ಮಕರ್ಮದ ಸ್ಪೂರ್ತಿಯನ್ನು ನೀಡುವ ಕ್ಷೇತ್ರವಾಗುವ ಬಗ್ಗೆ ಪ್ರಯತ್ನ ಮಾಡಿ ನನ್ನ ಸ್ಮೃತಿಯನ್ನು ಬೆಳೆಸುವ ವದ್ದಳ್ಳಿ ಆಶ್ರಮ ನನ್ನ ಪ್ರತಿನಿಧಿಯಾಗಿ ನಾನು ಅಲ್ಲಿ ಇಟ್ಟುಬ೦ದಿದ್ದೇನೆ. "ಧರ್ಮೋ ರಕ್ಷತಿ ರಕ್ಷಿತಃ" ಎ೦ಬ೦ತೆ ಅದರ ರಕ್ಷಣೆಯನ್ನು ನೀವು ಮಾಡಿದರೆ ಅದು ಒಳ್ಳೆ ಘಟ್ಟಿಯಾಗಿ ನಿಮ್ಮಗಳ ರಕ್ಷಣೆ ಮಾಡುವುದು. ಅದನ್ನು ಪವಿತ್ರವಾಗಿ ಉಳಿಸುವುದು,ಬೆಳೆಸುವುದೆಲ್ಲ ನಿಮ್ಮಕಡೆಗಿದೆ. ಯವುದೋ ಒ೦ದು ತುಚ್ಹ ಹೇತುವನ್ನಿಟ್ಟು ಕೆಲವರು ದೂರುತ್ತಿದ್ದರೂ ನೀವು ಅದರಲ್ಲಿ ಅಚಲ ವಿಶ್ವಾಸವಿಟ್ಟರೆ ಸ್ವಲ್ಪ ಕಾಲದಲ್ಲಿಯೇ ಅದು ತನ್ನ ದಿವ್ಯ ಪ್ರಭಾವದಿ೦ದ ನಿ೦ದಿಸುವರನ್ನು ಬಯಸುವರನ್ನಾಗಿ ಮಾಡುವುದು ಸೂರ್ಯಪ್ರಕಾಶದಷ್ಟೆ ಇದು ಸತ್ಯವಿದೆ. ನೀವೇಲ್ಲರೂ ಧರ್ಮಪ್ರಾಣರಾಗಿರಿ ನಿಮ್ಮೆಲ್ಲರ ಜೀವನವೂ ದಿವ್ಯವಾಗಲಿ. ಯಾವ ಕು೦ದು ಕೊರತೆ ಇಲ್ಲದೆ ಸುಖರೂಪಿಗಳಾಗಿ ಬಾಳಿರಿ. ನಿಮ್ಮನ್ನು ಮೇಲಿನ ಪ೦ಕ್ತಿಯಲ್ಲಿಟ್ಟುಕೊ೦ಡು ಎಲ್ಲಾ ಜನರು ಕೃತಾರ್ಥರಾಗಲಿ. ಧರ್ಮದ ಸ್ಪೂರ್ತಿಕೇ೦ದ್ರವೇ ವದ್ದಳ್ಳಿಯೆ೦ದು ಆ ದಿವ್ಯ ಧರ್ಮದ್ವಜವು ಸಾರುತ್ತಿದೆ. ಅತ್ತ ಕಡೆಗೆ ಗಮನ ಕೊಡಿ.

Monday, 16 July 2012
ರಾಮಾಯಣ ಅಂದರೆ.......
| ಮುಕುಂದೂರು ಸ್ವಾಮಿಗಳು ಉಪಯೋಗಿಸುತ್ತಿದ್ದ ಭಾವಿ |
ರಾಮಾಯಣ ಅಂದರೆ ಮುಗಿಯದ ಕಥೆ ಎಂಬರ್ಥದಲ್ಲಿ ಆಡು ಮಾತಿನಲ್ಲಿ ಬಳಸುತ್ತಾರೆ. ಈ ಚರ್ಚೆಯೂ ಅದೇ ರೀತಿ ಮುಂದುವರೆದಿದೆ. ಅವಧೂತ ಮುಕುಂದೂರು ಸ್ವಾಮಿಗಳು ರಾಮಾಯಣದ ಪಾತ್ರಧಾರಿಗಳನ್ನು ವಿವರಿಸಿದ್ದು ಹೀಗೆ: ದಶರಥ: ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳನ್ನು ಸೇರಿಸಿ ರಥ ಮಾಡಿಕೊಂಡು ಸವಾರಿ ಮಾಡಿದವನು. ಇವುಗಳನ್ನು ಸ್ವಾಧೀನ ಪಡಿಸಿಕೊಂಡವನಿಗೆ ಸಿಗುವುದು ಆನಂದ, ಅದೇ ರಾಮ. ಮನಾನಂದ, ಆತ್ಮಾನಂದ, ಬ್ರಹ್ಮಾನಂದರೇ ಅವನ ತಮ್ಮಮದಿರಾದ ಲಕ್ಷ್ಮಣ, ಭರತ, ಶತೃಘ್ನ. ಜನಕ ರಾಜ ಋಷಿಯಂತೆ ಸಾಧಕ, ಅವನಿಗೆ ಸಿಕ್ಕಿದ್ದು ಜ್ಞಾನಾಂಬಿಕೆ ಸೀತೆ. ರಾಮ-ಸೀತೆ ಸೇರಿ ಆನಂದ-ಜ್ಞಾನ ಸೇರಿ- ಜ್ಞಾನಾನಂದ ಮೂಡಿತು. ಜಗತ್ತಿನ ಐಶ್ವರ್ಯದ ಆಸೆ ಎಂಬ ಮಾಯಾಮೃಗವನ್ನು ಜ್ಞಾನದ ಕೋರಿಕೆಯಂತೆ ಆನಂದ ಸಂಹರಿಸಿದ. ದಶರಥ ಹತ್ತು ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ಸವಾರಿ ಮಾಡಿದರೆ ರಾವಣ ತಲೆ ಮೇಲೆ ಅವನ್ನು ಕೂರಿಸಿಕೊಂಡ. ಅಂದರೆ ಅವನು ಇಂದ್ರಿಯಗಳ ದಾಸನಾಗಿದ್ದ. ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿ ಷಡ್ವರ್ಗಗಳು ಸೇರಿ ಅವನಿಗೆ ಇಪ್ಪತ್ತು ಕೈಗಳು. ಈ ಇಪ್ಪತ್ತು ಸಂಗತಿಗಳನ್ನು ಹೊತ್ತವರಿಗೆ ಜ್ಞಾನಾಂಬಿಕೆ ಒಲಿದಾಳೇ, ಸಿಕ್ಕಾಳೇ? ಅಶೋಕವನದಲ್ಲಿದ್ದವಳಿಗೆ ಶೋಕವೆಲ್ಲಿ? ಸುಗ್ರೀವ ಅಂದರೆ ಒಳ್ಳೆ ತಲೆ, ಒಳ್ಳೆ ಯೋಚನೆಗಳು. ರಾವಣ ಅನ್ನುವ ಅಹಂಕಾರ, ಮಮಕಾರಗಳನ್ನು ಕತ್ತರಿಸಿದರೆ ಒಳ್ಳೆ ಮನಸ್ಸು, ದೃಷ್ಟಿ, ಬ್ರಹ್ಮಜ್ಞಾನ, ಎಲ್ಲಾ ಸಿಕ್ಕಿ ಆನಂದ (ರಾಮ) ಸಿಗುತ್ತೆ. ಜನ ಪುರಾಣ ೋದಿ ಹೊರಗೇ ತಿಳಕೊಂಡು ಹೊರಗೇ ಆಟ ಆಡ್ತಾರೆ. ಒಳಗಿನ ತಿರುಳು ತಿಳಿದಾಗಲೇ ಅದರ ಮಹತ್ತು ಸಿಗೋದು. ಅದನ್ನು ಅನುಭವಿಸಬೇಕು.
-ಕವಿ ನಾಗರಾಜ್
-ಕವಿ ನಾಗರಾಜ್
ನಿಜವಾದ ಶ್ರಾದ್ಧ ಯಾವುದು?
ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ. ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.
ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು " ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ ಪ್ರಾಣಪಕ್ಷಿ ಹಾರಿಹೋಯ್ತು.

Subscribe to:
Posts (Atom)