Wednesday, 11 July 2012

ಗರಾ ಬಿಟ್ರೇನೇ ಗುರು ನೋಡಪ್ಪಾ



ಒಮ್ಮೆ ಮಾತಿನ ಮಧ್ಯೆ ಮುಕು೦ದೂರು ಸ್ವಾಮಿಗಳುಃ "ಸಾವ್ಕಾರ೦ತಾವ(ಸಾಹುಕಾರ) ದುಡ್ಡಿರೋದು ಸ೦ನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒ೦ದೇ ಕಣೋ ಮಗ. ಅವ್ನಿಗೂ ಅಹ೦ಕಾರ ಬಿಟ್ಟಿಲ್ಲ ಇವ್ನಿಗೂ ಅಹ೦ಕಾರ ಬಿಟ್ಟಿಲ್ಲ.ಗರಾ ಬಿಟ್ರೇನೇ ಗುರು ನೋಡಪ್ಪಾ

"ಏಸು ಕಾಸು ಖರ್ಚಾದರು ಪರವಾಗಿಲ್ಲ ನಿನ್ನ ಮನೆತನ ನಿರ್ನಾಮ ಮಾಡ್ತಿನಿ ಅ೦ತಾನೆ ಸಾವ್ಕಾರ. ಒ೦ದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬೂದಿ ಮಾಡ್ಬಿತ್ತಿನಿ ಅ೦ತಾನೆ ಸ೦ನ್ಯಾಸಿ. ಇಬ್ರಿಗೂ ಗರಾ ಬಿಟ್ಟಿಲ್ಲ. ಗರಾ ಬಿಟ್ರೇನೇ ಗುರ ನೋಡಪ್ಪಾ" ಎ೦ದರು.

Sunday, 8 July 2012

ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಳೊಡನೆ ಕೆಲವು ನಿಮಿಷಗಳು


ಇಂದು ಬೆಂಗಳೂರಿನ ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಮನೆಗೆ ನಾವು ಕೆಲವು ಮಿತ್ರರು ಹೋಗಿದ್ದೆವು . ನನ್ನೊಡನೆ ಶ್ರೀಮತಿ ಮಾಲತಿ, ಶ್ರೀಯುತ ಶಂಕರ್, ಶ್ರೀ ಶಿವಕುಮಾರ್ ಮತ್ತು ಅವರ ಸ್ನೇಹಿತರಾದ ಶ್ರೀ ಗಿರೀಶ್  ಇದ್ದರು. ಶ್ರೀ ಶಾಸ್ತ್ರಿಗಳೊಡನೆ ನಡೆಸಿದ ಮಾತುಕತೆಯ ವೀಡಿಯೋ / ಆಡಿಯೋ ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು.ಶ್ರೀ ಶಾಸ್ತ್ರಿಗಳು ಅವರ ತೊಂಬತ್ತೆಳನೆಯ ವಯಸ್ಸಿನಲ್ಲಿ ನಮ್ಮೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾನು ಇನ್ನು ಒಂದು ವಾರ ಕಾಲ ಮುಂಬೈ ಪ್ರವಾಸದಲ್ಲಿರುವುದರಿಂದ ಪ್ರವಾಸದಿಂದ ಹಿಂದಿರುಗಿದ ನಂತರ ಆಡಿಯೋ /ವೀಡಿಯೋ ಪ್ರಕಟಿಸುವೆ..

Saturday, 7 July 2012

ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು


ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು - ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರುನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್...ತು. ರುಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಭಾಯಿ ಯವರೆಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಶ್ರೀ ಗಾಣಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಸ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನು ನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವ್ರುತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂಬುವನಾಗಿ ವರವನಿತ್ತು ಶ್ರೀ ದತ್ತನು ಅಂತರ್ಧಾನನಾದನು. ಇದರಂತೆಯೇ ಗರ್ಭವತಿಯಾದ ಕಮಲಾಭಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಲಾಡ್ ಚಿಂಚೋಳಿಗೆ ಕರೆದೋಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಭರ್ಗ ಜಿಲ್ಲೆಯಲ್ಲಿ ಗಾಣಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦ ರಲ್ಲಿ ಮಾರ್ಘಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಟೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಶ್ರೀಧರರ ೧೨ ನೇ ವಯಸ್ಸಿನೊಳಗಾಗಿಯೇ ತಂದೆ,ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗುಲಿದ್ದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ "ನೂತನ ವಿದ್ಯಾಲಯದಲ್ಲೂ ಅನಂತರ ಪುಣೆಯ "ಅನಾಥ ವಿದ್ಯಾರ್ಥಿ ಗ್ರುಹ" ಹಾಗು "ಭಾವೆ ವಿದ್ಯಾಲಯ" ದಲ್ಲಿಯೂ ನಡೆಯಿತು. ಶ್ರೀಧರರಿಗೆ ದಿನದಿಂದ ದಿನಕ್ಕೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ, ಕೇವಲ ಒಂದು ಕೊವ್ಪೀನ ಮಾತ್ರದ ಉಡುಪಿನಿಂದ ಗುರುಸೇವಾರೂಪಿ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕಡು ತಪಸ್ಸನ್ನಾಚರಿಸುತ್ತಿರಲು ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ’ಭಗವಾನ್’ ಎಂಬ ನಾಮವನ್ನು ಧರ್ಮ ಜಾಗ್ರುತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು. ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರ್ಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಸಹವಾಸದಲ್ಲಿ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು. ಅನಂತರ ಶಕೆ ೧೮೬೪(೧೯೪೨ ನೇ ಇಸವಿ) ಚಿತ್ರಭ್ಹಾನು ಸಂವತ್ಸರದ ವಿಜಯದಶಮಿಯಂದು ಶ್ರೀ ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರಸ್ವಾಮಿ ಮಹರಾಜರು ಚಿಕ್ಕಮಂಗಳೂರು, ಕಳಲೆ, ಮಂಗಳೂರು, ಕಾಶಿ, ಉತ್ತರಕಾಶಿ, ಕನ್ಯಾಕುಮಾರಿ, ಅಯೋಧ್ಯಾ,ಬದರಿಕಾಶ್ರಮ, ದ್ವಾರಕ, ಗಿರಿನಾರ್, ಕುರಗಡ್ಡೆ, ಸಜ್ಜನಗಡ, ವರದಪುರ, ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯವನ್ನು ಮಾಡಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋದ್ಧಾರ ಮಾಡಿದರು. ಪೇಟೆ-ಪಟ್ಟಣ, ಊರು-ಹಳ್ಳಿಗಳನ್ನು ಸಂಚರಿಸಿ ಭಕ್ತರಿಗೆ ದರ್ಶನವಿತ್ತು ಧರ್ಮ,ಭಕ್ತಿ, ಗ್ಯಾನ, ವ್ಯೆರಾಗ್ಯವನ್ನು ಭೋಧಿಸಿ ಧರ್ಮಜಾಗ್ರುತಿಯನ್ನುಂಟು ಮಾಡಿದರು. ಇವರ ಸನ್ನಿದಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ ಅರ್ಥಾರ್ಥಿ ಜಿಗ್ನ್ಯಾಸು ಗ್ನ್ಯಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು. ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರ್ದ ಸಮೇಪದ ವರದಪುರ(ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ,ನಿವಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಓಂದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚತುರ್ಮಾಸವು ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ’ಶ್ರೀಧರಾಶ್ರಮ’ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ಈ ರೀತಿಯಿಂದ ಧರ್ಮ ಜಾಗ್ರುತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳವರ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯುಂಟಾಗಿ ಈ ವರದ ಪುರದಲ್ಲಿ ಮತ್ತು ಇನ್ನಿತರ ಭಾಗದಲ್ಲಿಯು ಏಕಾಂತ ಮಾಡಿದರು. ನಂತರ ೫ ವರ್ಷಗಳ ಏಕಾಂತ ಮಾಡಬೇಕೆಂಬ ವಿಚಾರವುಂಟಾಗಿ ವರದಪುರ ಶ್ರೀಧರತೀರ್ಥದ ಮೆಲ್ಭಾಗದಲ್ಲಿ ಏಕಾಂತಕ್ಕ್ಕಗಿಯೇ ಹೊಸತಾಗಿ ನಿರ್ಮಿಸಲಾದ ಕುಟೀರದಲ್ಲಿ ಏಕಾಂತ ಪ್ರಾರಂಭವಾಯಿತು. ೪ ವರ್ಷಗಳು ಕಳೆದು ೫ ನೇ ವರ್ಷ ಶ್ರೀಗಳವರು ತಮ್ಮ ದೇಹವನ್ನು ಬಿಡುವ ಸಂಕಲ್ಪ ಮಾಡಿ ಈ ವಿಚಾರವನ್ನು ಅಪ್ರತ್ಯಕ್ಷವಾಗಿ ಕೆಲವರಿಗೆ ಸೂಚಿಸಿದರೂ ಇದು ಆಗ ಎಷ್ಟೋ ಜನರಿಗೆ ತಿಳಿಯದೆಯೂ ಇರಬಹುದು. ಅಂತಿಮವಾಗಿ ಶ್ರೀಗಳವರು ಶಾ.ಶ.೧೮೯೫ ಪ್ರಮಾದಿ ನಾಮ ಸಂವತ್ಸರದ ಚ್ಯಿತ್ರ ವದ್ಯ ೨ ನೇ ಗುರುವಾರ(ತಾ. ೧೯-೪-೭೩) ಬೆಳಗ್ಗೆ ಶ್ರೀಗಳವರು ಧ್ಯಾನಸ್ಥರಾಗಿ ಈ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು

ಗುರುಪೌರ್ಣಮಿಯದಿನ (03-07-2012) ಜೋದ್ ಪುರದ ಗುರುಭಕ್ತರೊಬ್ಬರ ಮನೆಯಲ್ಲಿ ಶ್ರೀ ಶ್ರೀಧರಸ್ವಾಮಿಗಳ ಪಾದುಕೆಗಳಿಗೆ ಪಾದಪೂಜೆಯನ್ನು ಮಾಡಿದ ನ೦ತರ ಪಾದುಕೆಗಳನ್ನು ಇರಿಸಿದ್ದ ತಟ್ಟೆಯಲ್ಲಿ ಕ೦ಡುಬ೦ದ ಪಾದಗಳ ಗುರುತು.




ಮತ್ತೊಂದು ಘಟನೆ:
ಇದೇ ರೀತಿಯ ನಾನು ಕೇಳಿದ  ಒಂದು ಘಟನೆ ತಿಳಿಸಬಯಸುವೆ. ಶ್ರೀಧರ ಸ್ವಾಮಿಗಳನ್ನು ಪಾದಪೂಜೆಗಾಗಿ ಭಕ್ತರೊಬ್ಬರು ಆಹ್ವಾನಿಸಿರುತ್ತಾರೆ. ಪಾದಪೂಜೆ ಎಲ್ಲಾ ಮುಗಿದು ತೀರ್ಥ ಕೊಡುವ ಸಮಯ. ಮನೆಯ ಒಡತಿಯ ಕಣ್ಣಲ್ಲಿ ನೀರು ಕಂ ಭಗವಾನರು"ಯಾಕಮ್ಮಾ ಕಣ್ಣಲ್ಲಿ ನೀರು?" ಎನ್ನುವರು
-ಸ್ವಾಮಿ, ಕಾಶಿಯಲ್ಲಿ ಓದುತ್ತಿರುವ ನನ್ನ ಮಗ ಈ ಸಂದರ್ಭದಲ್ಲಿ ನಮ್ಮ ಮನೆಯಲ್ಲಿರಬಾರದಿತ್ತೇ? ಎಂದು ಅವನ ನೆನಪಲ್ಲಿ ಕಣ್ಣಲ್ಲಿ ನೀರು ಬಂತು.
-ಅದಕ್ಕೇನಂತೆ ಅವನಿಗೂ ತೀರ್ಥ ಕೊಡುವೆ ,ಆನಂತರವೇ ನೀವು ತೆಗೆದುಕೊಳ್ಳಿ, ಎಂದು ಆ ತಾಯಿಗೆ ಸಮಾಧಾನಹೇಳಿ   ಒಂದು ಉದ್ಧರಣೆ ತೀರ್ಥವನ್ನು  ಪಕ್ಕದಲ್ಲಿದ್ದ ತಟ್ಟೆಯಲ್ಲಿ ಹಾಕಿ ಅವನು ತೆಗೆದು ಕೊಂಡಿದ್ದಾನೆ, ಈಗ ನೀವು ತೆಗೆದುಕೊಳ್ಳಿ ಎನ್ನುತ್ತಾರೆ.
ಈ ತಾಯಿ ತೀರ್ಥ ತೆಗೆದುಕೊಳ್ಳುವರು
ನಾಲ್ಕು ದಿನ ಕಳೆಯುತ್ತೆ. ಮಗನಿಂದ  ತಾಯಿಗೆ ಒಂದು ಪತ್ರ ಬರುತ್ತದೆ. ಪತ್ರದಲ್ಲಿ........
ಮಾ||ಶ್ರೀ|| ತಾಯಿಯವರಿಗೆ ಸಾಸ್ಟಾಂಗ ನಮಸ್ಕಾರಗಳು. ಒಂದು  ಪರಮಾಶ್ಚರ್ಯ ಸಂಗತಿ ತಿಳಿಸಲು ನಿಮಗೆ ಈ ಪತ್ರ ಬರೆಯುತ್ತಿರುವೆ. ವಿಶ್ವನಾಥನ ದರ್ಶನಕ್ಕೆಂದು ಮೊನ್ನೆ ಹೋಗಿದ್ದೆ. ವಿಶ್ವನಾಥನ ದರ್ಶನ ಮಾಡಿ ತೀರ್ಥ       ತೆಗೆದುಕೊಳ್ಳುವಾಗ ನನ್ನ ಕೈಗೆ ಪಂಚಾಮೃತ ತೀರ್ಥ ಬಿತ್ತು, ಆದರೆ ಅಲ್ಲಿ ಕೊಡುತ್ತಿದ್ದುದು ನೀರು ತೀರ್ಥ ಮಾತ್ರ!! ಅಲ್ಲಿದ್ದ ಎಲ್ಲರಿಗೂ ಪರಮಾಶ್ಚರ್ಯ ವಾಯ್ತು.!!
ಭಗವಾನರು  ಇಲ್ಲಿ ತಟ್ಟೆಯಲ್ಲಿ ಹಾಕಿದ ತೀರ್ಥ ಕಾಶಿವಿಶ್ವನಾಥನ ತೀರ್ಥವಾಗಿ ಅದೇ ಸಮಯದಲ್ಲಿ ಮಗನ ಕೈ ಸೇರಿರುತ್ತದೆ!!
ಇಂತಹ  ಅಚ್ಚರಿಯ ಘಟನೆಗಳು ಅದೆಷ್ಟೋ!!
ನಾವು ಸಾಮಾನ್ಯರು. ನಾವು ಎಲ್ಲವನ್ನೂ  ನಮ್ಮ ಕಣ್ ಅಳ ತೆಗೆ ನೋಡುತ್ತೇವೆ. ಆದರೆ  ಸಿದ್ಧ ಪುರುಷರು ಏನು    ಬೇಕಾದರೂ ಮಾ  ಬಲ್ಲರು. ಒಂದೇ ವೇಳೆ ಹತ್ತಾರು ಕಡೆ ದರ್ಶನ ಕೊಟ್ಟ   ಮಹಾತ್ಮರು ಗಳಿದ್ದಾರೆ.  ಕಳೆದ ಶನಿವಾರ ನಮ್ಮೂರಿನಲ್ಲಿದ್ದರು, ಎಂದು ಒಬ್ಬ ಭಕ್ತ ಹೇಳಿದರೆ , ಇಲ್ಲಾ...ಇಲ್ಲಾ...ನಮ್ಮೂರಿನಲ್ಲಿದ್ದರು, ಎಂದು ಮತ್ತೊಬ್ಬರು , ಇಲ್ಲಾ ಸ್ವಾಮಿ   ಅಂದು ನಮ್ಮೂರಿನಲ್ಲಿ ಪಾದಪೂಜೆ ಮಾಡಿದ್ದೇವೆ! ಎಂದು  ಮಗದೊಬ್ಬರು ಹೇಳಿದರೆ!!! ಇದೆಲ್ಲಾ ಸಾಧ್ಯ ,ನಮಗಲ್ಲಾ,  ಭಗವಾನರಂತವರಿಗೆ!! ಅದನ್ನು ಅವರು ಪ್ರಚಾರ ಮಾಡುವುದೇ ಇಲ್ಲ. ಭಕ್ತರು ಬಯಸಿದಲ್ಲಿ ದರ್ಶನ ಕೊಡುತ್ತಾರೆ!! ಜನರು ಅಚ್ಚರಿ ಪಡುತ್ತಾರೆ, ಅಷ್ಟೆ!
-ಹರಿಹರಪುರಶ್ರೀಧರ್


ನಾಳೆಯಿಂದ ಒಂದುವಾರ ನಾನು ಬೆಂಗಳೂರು ಮತ್ತು ಮುಂಬೈ ಪ್ರವಾಸ ದಲ್ಲಿರುವೆ.  ಈ ದಿನಗಳಲ್ಲಿ ಮಿತ್ರ ಲೇಖಕರು ತಮ್ಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಲೇ ಇರುತ್ತಾರೆ. ನಾನು ಹಿಂದಿರುಗಿದ ಮೇಲೆ ಮುಕುಂದೂರು ಸ್ವಾಮಿಗಳ ವಿಚಾರಗಳನ್ನು ಹಂಚಿಕೊಳ್ಳುವೆ. ಸಹಕಾರ ಎಂದಿನಂತಿರಲಿ. ನಾಳೆ ಸಂಜೆ ಐದು ಗಂಟೆಗೆ ಶ್ರೀ ಬಳೆಗೆರೆ ಕೃಷ್ಣ ಶಾಸ್ತ್ರಿಗಳನ್ನು ಅವರ ಬೆಂಗಳೂರು ನಿವಾಸದಲ್ಲಿ ಭೇಟಿಯಾಗುವ ಕಾರ್ಯಕ್ರಮವಿದೆ. ಅವರೊಡ ನೆ ನಡೆದ ಮಾತುಕತೆಯ ಬಗ್ಗೆ  ಪಾಲ್ಗೊಂಡಿದ್ದ ಯಾರಾದರೂ ಬರೆಯ ಬಹುದು. ಇಲ್ಲವಾದರೆ ನಾನು ಇನ್ನು ಒಂದು ವಾರದ ನಂತರ ಪ್ರವಾಸದಿಂದ ಹಿಂದಿರುಗಿ ನಂತರ  ಬರೆಯುವೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

ಶ್ರೀ ಬೇಳೆಗೆರೆ ಕೃಷ್ಣ ಶಾಸ್ತ್ರಿಗಳ ಭೇಟಿಯ ವಿವರ:


ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406

Friday, 6 July 2012

ಧರ್ಮಕಾರ್ಯಕ್ಕಾಗಿಯೇ ದೇಹವನ್ನು ತಾಳಿದ ವಿಭೂತಿಗಳು ನಮ್ಮ ಕರ್ನಾಟಕಕ್ಕೆ ಲಭಿಸಿದ್ದೆ೦ದರೆ ಅದು ನಿಮ್ಮೇಲ್ಲರ ದೊಡ್ಡ ಸೌಭಗ್ಯವೇ ಸರಿ



ತಾ|| ೧೦-೧-೧೯೬೩ನೇ ಗುರುವಾರ ಶ್ರೀ ಶೃ೦ಗೇರಿ ಶಾರದ ಪೀಠವನ್ನು ಅಲ೦ಕರಿಸಿದ್ದ ಶ್ರೀಮದ್ ಅಭಿನವ ವಿಧ್ಯಾತೀರ್ಥ ಸ್ವಾಮಿಗಳು ವರದಪುರಕ್ಕೆ ಆಗಮಿಸಿದರು. ಶೃಗೇರಿ ಸ್ವಾಮಿಗಳನ್ನು ಇದಿರುಗೊಳ್ಳಲು ಶ್ರೀಧರಸ್ವಾಮಿಗಳು ಪಾದಚಾರಿಗಳಾಗಿ ಒ೦ದು ಫರ್ಲಾ೦ಗಿನವರೆಗೂ ಹೋದರು. ವಾದ್ಯ ಮತ್ತು ವೇದಘೋಷಗಳೊಡನೆ ತಮ್ಮನ್ನು ಸ್ವಾಗತಿಸಲು ಶ್ರೀಧರಸ್ವಾಮಿಗಳು ಬರುತ್ತಿರುವುದನ್ನು ಕ೦ಡ ಶ್ರೀ ಜಗದ್ಗುರುಗಳು ತಮ್ಮ ವಾಹನವನ್ನು ನಿಲ್ಲಿಸಿ ಕೆಳಗಿಳಿದರು. ಗುರುಗಳು  ವಾಹನದಲ್ಲಿ ಕುಳಿತುಕೊಳ್ಳಲು ಪ್ರಾರ್ಥಿಸಿದರೂ ಕೂಡ ಜಗದ್ಗುರುಗಳು ಕೆಳಗಿಳಿದು ಬ೦ದರು. ಪ್ರಥಮವಾಗಿ ಶ್ರೀರಾಮದೇವರ ದರ್ಶನ ಮಾಡಿ ನ೦ತರ ಶ್ರೀ ದುರ್ಗಾ೦ಬೆಯ ದರ್ಶನಮಾಡಿದರು. ಈ ಸಮಯದಲ್ಲಿ ಶ್ರ್ರೀ ಜಗದ್ಗುರುಗಳು ಮತ್ತು ಶ್ರೀಧರಸ್ವಾಮಿಗಳು ಪರಸ್ಪರ ಸ೦ಸ್ಕೃತದಲ್ಲಿಯೇ ಸ೦ಭಾಷಿಸುತ್ತಿದ್ದರು.
ಚ೦ದ್ರಸಾಲೆಯಲ್ಲಿ ಆಸನಸ್ಥರಾದ ಈ ಧರ್ಮ ಬಾಸ್ಕರರ ಅಪೂರ್ವ ದಿವ್ಯದರ್ಶನವು ನೆರೆದ ಎಲ್ಲ ಭಕ್ತಕೋಟಿಗಾಯಿತು.
ಈ ಸ೦ಧರ್ಬದಲ್ಲಿ ಅಲ್ಲಿ ನೆರೆದ ಭಕ್ತಕೋಟಿಯನ್ನು ಉದ್ದೇಶಿಸಿ ಶೃ೦ಗೇರಿಯ ಶ್ರೀ ಜಗದ್ಗುರುಗಳು ಶ್ರೀ ಶಾರದೆಯ  ಆಶಿರ್ವಾದವೇ ಸರಿ ಎ೦ಬ೦ತೆ -
"ಶ್ರೀ ಶ್ರೀಧರ ಸ್ವಾಮಿಗಳು ಮಾಡಿದ ಧರ್ಮ ಪ್ರಚಾರವನ್ನು ಕಣ್ಣಾರೆ ಕ೦ಡು ನಾನು ತು೦ಬಾ ಸ೦ತುಷ್ಟನಾಗಿದ್ದೇನೆ. ಇ೦ತಹ ಧರ್ಮಕಾರ್ಯಕ್ಕಾಗಿಯೇ ದೇಹವನ್ನು ತಾಳಿದ ವಿಭೂತಿಗಳು ನಮ್ಮ ಕರ್ನಾಟಕಕ್ಕೆ ಲಭಿಸಿದ್ದೆ೦ದರೆ ಅದು ನಿಮ್ಮೇಲ್ಲರ ದೊಡ್ಡ ಸೌಭಗ್ಯವೇ ಸರಿ. ಅವರ ಧರ್ಮೋಪದೇಶವನ್ನು ಚನ್ನಾಗಿ ಕೇಳಿ ಅದರ ಆಚರಣೆಯಿ೦ದ ನೀವೆಲ್ಲರೂ ಕೃತಾರ್ಥರಾಗಿರಿ. 'ಧರ್ಮೋ ರಕ್ಷತಿ ರಕ್ಷಿತಃ' ನೀವು ಧರ್ಮದ ಸ೦ರಕ್ಷಣೆಯನ್ನು ಮಾಡಿದರೆ ನಿಮ್ಮಗಳ ರಕ್ಷಣೆಯನ್ನು ಧರ್ಮವು ಮಾಡುವುದು" ಎ೦ದು ಜಗದ್ಗುರುಗಳ ಶ್ರೀ ಮುಖದಿ೦ದ ಬ೦ದ ಅಮೃತವಾಣಿಯನ್ನು ಕೇಳಿದ ಶ್ರೊತೃವೃ೦ದವು ಸ೦ತುಷ್ಟವಾಯಿತು.
ನ೦ತರ ಶ್ರೀ ಜಗದ್ಗುರುಗಳವರು ಮತ್ತು ಶ್ರೀಧರ ಸ್ವಾಮಿಗಳವರು ಒಳ್ಳೆ ಆತ್ಮೀಯ ಪ್ರೀತಿಯಿ೦ದ ಒ೦ದು ಘ೦ಟೆಯವರೆಗೂ ಧರ್ಮದ ಸದ್ಯದ ಪರಿಸ್ಥಿತಿಯ ಬಗ್ಗೆ ಏಕಾ೦ತದಲ್ಲಿ ಸಮಾಲೋಚನೆಯನ್ನು ನಡೆಸಿದರು.
ಶ್ರೀಧರ ಸ್ವಾಮಿಗಳು ಮು೦ದಿನ ತಮ್ಮ ಎರಡು ವರ್ಷಗಳ ತಪಸ್ಸಿನ ಸ೦ಕಲ್ಪವನ್ನು ಶ್ರೀ ಜಗದ್ಗುರುಗಳಿಗೆ ತಿಳಿಸಿ ಅಪ್ಪಣೆಯನ್ನು ಬೇಡಿದಾಗ 'ಅಸ್ತು" ಎ೦ದು ಹೇಳಿ ವಿಶ್ವಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿಗಾಗಿ ಶ್ರಮಪಡುತ್ತಿರುವ ಗುರುಗಳನ್ನು  ಕೊ೦ಡಾಡಿ ಒ೦ದು ದೊಡ್ಡ ಸ್ಪಟಿಕದ ಜಪಸರವನ್ನು ಪ್ರಸಾದವೆ೦ದು ಶ್ರೀ ಶ್ರೀಧರಸ್ವಾಮಿಗಳಿಗೆ ದಯಪಾಲಿಸಿದರು.
ನ೦ತರ ಇಬ್ಬರು ಶ್ರೀ ಶ್ರೀಧರ ಕುಟಿಯನ್ನು ಕಾಣಲು ಹೊರಟರು ನಿಸರ್ಗ ರಮಣೀಯವಾದ   ತಪೋಭೂಮಿಯನು  ಕ೦ಡು ಶ್ರೀ ಜಗದ್ಗುರುಗಳಿಗೆ ಮಹದಾನ೦ದವಾಯಿತು. ಮೇಲಿನ ಕುಟಿಗೆ ಹೋಗಿ ಪ್ರಧಾನ ಬಾಗಿಲಿನ ಮೆಟ್ಟಿಲುಗಳಲ್ಲಿ ಕುಳಿತಿರುವಾಗ ಧ್ವಜಸ್ತ೦ಭದ ಮೇಲೆ ಸ್ಥಾಪಿಸಲಿರುವ ಧರ್ಮದ್ವಜವನ್ನು ತರಿಸಿ ತಮ್ಮ ಅಮೃತಹಸ್ತಗಳಿ೦ದ ಸ್ವರ್ಶಿಸಿ ತಮ್ಮ ಬಲಬದಿಗೆ ಇಟ್ಟುಕೊ೦ಡರು. ಶ್ರೀ ಶ್ರೀಧರ ಸ್ವಾಮಿಗಳು ಸಹ ಅಲ್ಲಿಯೇ ಕೆಳಗಿನ ಮೆಟ್ಟಿಲಿನಮೇಲೆ ಕುಳಿತಿದ್ದರು. ಇ೦ತಹ ಅಪೂರ್ವ ಸನ್ನಿವೇಶದ ಸಮಯದಲ್ಲಿ ತೆಗೆದ ಛಾಯಚಿತ್ರವಿದು.

ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ಭೇಟಿ

         
ಯೇಗ ದಾಗೆಲ್ಲಾ ಐತೆ ಪುಸ್ತಕದಿಂದ ಪ್ರೇರಣೆ ಪಡೆದಿರುವ  ಓದುಗ ಬಂಧುಗಳೇ,   ಅವಧೂತರಾದ  ಮುಕುಂದೂರು ಸ್ವಾಮಿಗಳ ಬಗ್ಗೆ  ಹೆಚ್ಚು ತಿಳಿದುಕೊಳ್ಳುವ ಕಾತುರ, ಅವರ ವಿಚಾರದ ಪ್ರಚಾರ ಮಾಡುವ ಉದ್ಧೇಶದಿಂದ  ನಾವು ಕೆಲವು ಮಿತ್ರರು ನಮ್ಮ  ಹುಡುಕಾಟ ಆರಂಭಿಸಿದ್ದೇವೆ. ಮೊದಲನೆಯ  ಹಂತವಾಗಿ ಅರಸೀಕೆರೆ ಸಮೀಪದ  ಆಶ್ರಮಕ್ಕೆ ಭೇಟಿಕೊಟ್ಟು ಕೆಲವರನ್ನು ಮಾತನಾಡಿಸಿರುವ ಬಗ್ಗೆ ಈಗಾಗಲೆ ವರದಿಮಾಡಲಾಗಿದೆ. ಮುಂದಿನ ಹೆಜ್ಜೆಯಾಗಿ ಮುಕುಂದೂರು ಸ್ವಾಮಿಗಳನ್ನು ಬಹಳ ಹತ್ತಿರದಿಂದ ಬಲ್ಲವರೂ,  ಅವರ ಬಗ್ಗೆ  " ಯೇಗ ದಾಗೆಲ್ಲಾ ಐತೆ"  ಪುಸ್ತಕವನ್ನು ಬರೆದು ನಮ್ಮಲ್ಲಿ  ಪ್ರೇರಣೆ ನೀಡಿರುವ ವಯೋ ವೃದ್ಧರಾದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಭೇಟಿಮಾಡಲು ಉದ್ಧೇಶಿಸಲಾಗಿದೆ. ಪೂಜ್ಯರನ್ನು ಭೇಟಿ ಮಾಡಲು ದೂರವಾಣಿ ಮೂಲಕ ವಿನಂತಿಸಿ ಅನುಮತಿ ಪಡೆಯಲಾಗಿದೆ. ಪೂಜ್ಯರನ್ನು  ಭೇಟಿಮಾಡಬಯಸುವವರು ನಮ್ಮೊಡನೆ     ಸೇರಬಹುದು.

ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406