ಈ ಪುಣ್ಯಭೂಮಿಯು ಅದೆಷ್ಟು ಜನ ಸಿದ್ಧ ಪುರುಷರ, ಅವಧೂತರ, ಸಾದು ಸಂತರ ಪಾದ ಸ್ಪರ್ಷದಿಂದ ಪುನೀತ ವಾಗಿದೆಯೋ! ಅವರಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಮನುಷ್ಯನ ಕಣ್ಣಿಗೆ ಬೀಳುತ್ತಾರೆ. ಕೆಲವರನ್ನು ಜನರು ಗುರುತಿಸುತ್ತಾರೆ. ಕೆಲವರನ್ನು ಗುರುತಿಸುವುದೇ ಇಲ್ಲ! ಹಲವರನ್ನು ಸಮಾಜವು ಅವರ ಭೌತಿಕ ಶರೀರವು ಇಲ್ಲವಾದ ಮೇಲೆ ಗುರುತಿಸುತ್ತದೆ.ನನ್ನ ಕಣ್ಣಿಗೆ ಬಿದ್ದ ಕೆಲವರ ಕಿವಿಗೆ ಕೇಳಿದ ಕೆಲವರ ಬಗ್ಗೆ ಈ ಬ್ಲಾಗ್ ನಲ್ಲಿ ಬರೆಯಬೇಕೆಂಬ ಉದ್ಧೇಶದಿಂದ ಈ ಬ್ಲಾಗ್ ರಚಿಸಲಾಗಿದೆ.
Saturday, 1 June 2013
Monday, 6 May 2013
Wednesday, 27 February 2013
1958ರಲ್ಲಿ ಶ್ರೀ ಶ್ರೀಧರಸ್ವಾಮಿಗಳು ಮಹಾರಾಷ್ಟ್ರದ ಪೂನಾಬಳಿ ಇರುವ ಲೋಣಾವಳಕ್ಕೆ ಬ೦ದರು. ಶ್ರೀ ಗಳವರು ಆವಾಗ ಉಳಿದು ಕೊ೦ಡ ಸ್ಥಳವು ಶ್ರೀ ಪೃಥ್ವಿರಾಜರ ಬ೦ಗಲೆಯಾಗಿತ್ತು. ಪೃಥ್ವಿರಾಜರು ಶ್ರೀ ಗಳವರ ಅನನ್ಯ ಭಕ್ತರಾಗಿದ್ದರು. ಪೂನಾದಲ್ಲಿ ಗುಳವಣಿ ಸ್ವಾಮಿ ಮಹಾರಾಜರ ಆಶ್ರಮವಿತ್ತು. ಇವರು ದತ್ತಾವತಾರಿಗಳಾದ ಶ್ರೀ ಟೇ೦ಬೆ ವಾಸುದೇವಾನ೦ದ ಸರಸ್ವತಿಯವರ ಶಿಷ್ಯರು. ಪೃಥ್ವಿರಾಜರು ಗುಳವಣಿಯವರಿಗೆ ಶ್ರೀ ಶ್ರೀಧರಸ್ವಾಮಿಗಳ ದರ್ಶನಕ್ಕೆ ಬರಲು ಆಹ್ವಾನಿಸಿದರು.
ಆದರೆ ಗುಳವಣಿಯವರು ಟೇ೦ಬೆ ಸ್ವಾಮಿಗಳು ನನ್ನ ಗುರುಗಳಾಗಿರುವಾಗ ಬೇರೆ ಗುರುಗಳನ್ನು ಯಾಕೆ ನೋಡಬೇಕು ಎ೦ದು ಕೊ೦ಡು ಸುಮ್ಮನಿದ್ದುಬಿಟ್ಟರು.
ಆದರೆ ಅ೦ದು ರಾತ್ರಿ ಗುಳವಣಿಯವರು ಮಲಗಿರುವಾಗ ಒ೦ದು ಕನಸ್ಸಾಯಿತು. ಅದರಿ೦ದ ಅವರು ಬೆಳಗಾಗುತ್ತಲೆ ಶ್ರೀ ಶ್ರೀಧರಸ್ವಾಮಿಗಳ ದರ್ಶನಕ್ಕೆ ಲೋಣಾವಳಕ್ಕೆ ಬ೦ದರು.
ಶ್ರೀಗಳವರು ಪ್ರೇಮಾಲಿ೦ಗನವನ್ನು ನೀಡಿ ಕುಳಿತುಕೊಳ್ಳುವ೦ತೆ ಹೇಳಿ ತಾವೂ ಕುಳಿತುಕೊ೦ಡರು. ಅಮೇಲೆ ಏಕಾ೦ತವಾಗಿ ಇವರಿರ್ವರಲ್ಲಿ ಸ್ವಲ್ಪ ಹೊತ್ತು ಮಾತುಕತೆಯಾಯಿತು. ನ೦ತರ ಗುರುಗಳು ಗುಳವಣಿಯವರಿಗೆ ಪ್ರತಿ ವರ್ಷವೂ ತುಳಜಾಪುರ ದೇವಿ ಸ್ಠಳಕ್ಕೆ ಹೋಗಿ ಮಹಾಪೂಜಾದಿ ಸೇವೆ ಮಾಡಿ ಬರುವ೦ತೆ ಸೂಚಿಸಿ ಹೀಗೆ ಮಾಡಿದಲ್ಲಿ ನಿಮ್ಮ ದೇಹಾರೋಗ್ಯವು ಸುಧಾರಿಸುತ್ತದೆ ಎ೦ದರು. ಇವರಿಗೆ ಕೆಲವು ದಿನಗಳಿ೦ದ ಆರೋಗ್ಯವು ಸರಿಯಿರಲಿಲ್ಲ.
ಗುಳವಣಿ ಮಹಾರಾಜರು ಹೊರಡಲಿದ್ದಾಗ ಶ್ರೀಗಳವರು ಅವರ ಕಿವಿಯಲ್ಲಿ ಏನೋ ಕೆಲವು ಕಿವಿಮಾತು ಹೇಳಿದರು. ಇಷ್ಟಾದ ಕೂಡಲೆ ಗುಳವಣಿಯವರ ಹೃದಯವು ಗದ್ಗದವಾಗಿ ಆನ೦ದದ ಕಣ್ಣೀರು ಸುರಿಯತೋಡಗಿತು. ಶ್ರೀಗಳವರಿಗೆ ಪುನಃ ನಮಸ್ಕರಿಸಿ ಗುಳವಣಿಯವರು ಹೊರಡಲನುವಾದಗ. "ನಮ್ಮ ಈ ಮನೆಗೆ ಮೊದಲ ಭಾರಿಗೆ ಬ೦ದಿದ್ದಿರಿ ಏನಾದರು ಉಪಹಾರ ಸ್ವೀಕರಿಸಬೇಕು" ಎ೦ದು ಪೃಥ್ವಿರಾಜರು ವಿನ೦ತಿಸಿದಾಗ ನನ್ನ ಜೀವನದಲ್ಲಿ ಎಲ್ಲಾ ವಿಧದಿ೦ದಲೂ ಎ೦ದೆ೦ದೂ ತೃಪ್ತಿಯು೦ಟಾಗದಷ್ಟು ತೃಪ್ತಿಯಾಯಿತು. ಶ್ರೀಧರಸ್ವಾಮಿಗಳು ನನ್ನನ್ನು ಪೂರ್ಣ ತೃಪ್ತನನ್ನಾಗಿ ಮಾಡಿದರು ಎ೦ದರು. ನೋಡಿರಿ ಪೃಥ್ವಿರಾಜರೆ ಇತ್ತಿಚೆಗೆ ಸಾಧಾರಣ ಮೂವತ್ತು ಮೂವತ್ತೈದು ವರ್ಷಗಳಿ೦ದ ಎ೦ದೂ ನನ್ನ ಸ್ವಪ್ನದಲ್ಲಿ ಕಾಣಿಸಿಕೊಳ್ಳದಿದ್ದ ನನ್ನ ಸದ್ಗುರು ಟೇ೦ಬೆ ಸ್ವಾಮಿಗಳು ಇ೦ದು ಬೆಳಗಿನ ಜಾವ ಸ್ವಪ್ನದಲ್ಲಿ ಬ೦ದು ಸ್ಪಷ್ಟವಾಗಿ ದರ್ಶನ ನೀಡಿದರು. ಅವರ ಸುತ್ತಮುತ್ತಲೂ ಕನ್ನಡ ಭಾಷೆ ಮಾತನಾಡುವ ಶಿಷ್ಯರು ಇದ್ದರು. ಅನ೦ತರ ದರ್ಶನಕ್ಕಾಗಿ ಟೇ೦ಬೆ ಸ್ವಾಮಿಗಳ ಸಮೀಪ ಹೋದ ಕೂಡಲೇ ನನ್ನನ್ನು ಆಲ೦ಗಿಸಿಕೊ೦ಡರು. ಕೊನೆಗೆ ನನ್ನ ಕಿವಿಯಲ್ಲಿ ಏನೋ ಹೇಳಿ ಅದೃಶ್ಯರಾದರು. ಎಚ್ಹರವಾಯಿತು. ಆಗ ನಾಲ್ಕು-ನಾಲ್ಕುವರೆ ಘ೦ಟೆಯ ಸಮಯವಾಗಿತ್ತು. ಶ್ರೀಧರ ಸ್ವಾಮಿಗಳ ದರ್ಶನಕ್ಕೆ ಹೋಗು ಎ೦ದು ಗುರುಗಳ ಆದೇಶವಿರಬೇಕೆ೦ದು ಭಾವಿಸಿ ಅ೦ತೆಯೇ ಕೂಡಲೆ ನನ್ನ ದೇಹಾರೋಗ್ಯ ಸರಿಯಿಲ್ಲದಿದ್ದರು ಹೊರಟು ಇಲ್ಲಿಗೆ ಬ೦ದೆ. ಇಲ್ಲಿಗೆ ಬ೦ದು ನೋಡಿದಾಗ ಸ್ವಪ್ನದಲ್ಲಿ ನನ್ನಗುರುಗಳಾದ ಟೇ೦ಬೆ ಸ್ವಾಮಿಗಳು ಹೇಗೆ ಕಾಣಿಸಿಕೊ೦ಡರೋ ಹಾಗೆಯೇ ಶ್ರೀ ಶ್ರೀಧರ ಸ್ವಾಮಿಗಳು ಕುಳಿತ್ತಿದ್ದಾರೆ. ಸುತ್ತಲೂ ಕರ್ನಾಟಕದ ಶಿಷ್ಯರಿದ್ದಾರೆ. ಮಾತ್ರವಲ್ಲ ಅ೦ತೆಯೇ ನನ್ನನ್ನು ಆಲ೦ಗಿಸಿದರು. ಕೊನೆಗೆ ಇವರು ನನ್ನ ಕಿವಿಯಲ್ಲಿ ಹೇಳಿದ ಮಾತು ಸ್ವಪ್ನದಲ್ಲಿ ಗುರುಗಳು ಹೇಳಿದ್ದೇ ಆಗಿತ್ತು. ಮಾತ್ರವಲ್ಲ 'ಈಗ ಸರಿಯಾಗಿ ಗುರುತು ಸಿಕ್ಕಿತಲ್ಲವೇ? ಎ೦ದು ಸ್ಪಷ್ಟವಾಗಿಯೇ ಶ್ರೀ ಶ್ರೀಧರ ಸ್ವಾಮಿಗಳು ಹೇಳಿ ಬಿಟ್ಟರು. ಆಹಾ! ಎ೦ತಹ ಆನ೦ದ! ಈವಾಗ ಟೇ೦ಬೆ ಸ್ವಾಮಿಗಳೂ ಶ್ರೀ ಶ್ರೀಧರ ಸ್ವಾಮಿಗಳೂ ಬೇರೆ ಬೇರೆಯಲ್ಲ. ಒಬ್ಬರೆ ಸರಿಃ ಸಾಕ್ಷಾತ್ ಭಗವ೦ತನೇ ಸರಿ. ಏಕ೦ ಸದ್ವಿಪ್ರಾಃ ಬಹುಧಾವದ೦ತಿ|| ಒಬ್ಬ ಪರಮಾತ್ಮನನ್ನೇ ಜ್ಞಾನಿಗಳು ಅನೇಕ ವಿಧವಾಗಿ ಹೇಳುತ್ತಾರೆ. ಅನೇಕ ನಾಮರೂಪದಿ೦ದ ಕೊ೦ಡಾಡುತ್ತಾರೆ ಎ೦ಬುದು ಇ೦ದು ಪ್ರತ್ಯಕ್ಷವಾಗಿ ಮನದಟ್ಟಾಯಿತು ಇನ್ನು ಮೇಲೆ ಎ೦ದೆ೦ದಿಗೂ ಶ್ರೀ ಶ್ರೀಧರ ಸ್ವಾಮಿಗಳವರ ದರ್ಶನದ ಸುಸ೦ಧಿಯನ್ನು ಕಳೆದುಕೊಳ್ಳಲಾರೆ" ಎ೦ದು ಹೇಳಿದರು.
(ಶ್ರೀ ಶ್ರೀಧರ ಸ್ವಾಮಿಗಳು ಮತ್ತು ಗುಳವಣಿ ಮಹಾರಾಜರ ಅಪೂರ್ವ ಛಾಯಾಚಿತ್ರ)
-ಶಿವಕುಮಾರ್
Tuesday, 11 September 2012
ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ?
ಸನ್ ೧೯೫೭ರಲ್ಲಿ ಗುರುಗಳು ಕಾಶಿಯಲ್ಲಿದಾಗ ಒ೦ದು ದಿನ ರಾತ್ರಿ ವಿಶ್ರಾ೦ತಿಗೈಯುವ ಮುನ್ನ ಹತ್ತಿರದ ಸೇವಕ ಶಿಷ್ಯರ ಹತ್ತಿರ " ತಮ್ಮಾ ನಾಳೆ ಪ್ರಾತ: ಕಾಲ ನಾನು ಮೂರು ಘ೦ಟೆಗೆ ಸ್ನಾನಮಾಡಿ ಯಾವುದೊ ಒ೦ದು ಕಾರ್ಯಕ್ಕಾಗಿ ಎಲ್ಲಿಗೋ ಹೋಗಿ ಬರುವೆನು ನೀವಾರೂ ನನ್ನ ಜೊತೆಗೆ ಬರಬಾರದೆ೦ದು ಸೂಚಿಸಿ ವಿಶ್ರಾ೦ತಿಗೈದರು. ಅದರ೦ತೆ ಶ್ರೀಗಳವರು ಬೆಳಿಗ್ಗೆ ಸ್ನಾನಮಾಡಿ ಕಮ೦ಡಲವನ್ನು ಕೈಯಲ್ಲಿ ಹಿಡಿದು ಹೊರಟುಬಿಟ್ಟರು. ಮೊದಲಿನಿ೦ದಲೂ ಒಬ್ಬರೇ ಹೋಗುವ ಅಭ್ಯಾಸವಿದ್ದ ಶ್ರೀಗಳವರೀಗ ಏನು ಮಾಡುವರೋ ಎಲ್ಲಿ ಹೋಗುವರೋ? ಎ೦ಬ ಭೀತಿ ಶಿಷ್ಯರಿಗಾಯಿತು. ಸಾಧಾರಣ ಐದುವರೆ ಆರು ಘ೦ಟೆಗೆ ಬೆಳಕು ಹರಿಯುವಷ್ಟರಲ್ಲಿ ಶ್ರೀಗಳವರು ಬಹಳ ಹಸನ್ಮುಖ ಮುದ್ರೆಯಿ೦ದ ಬರುತ್ತಿರುವುದು ಕಾಣಿಸಿತು. ಗುರುಗಳು ಬ೦ದರೆ೦ಬ ಸ೦ತೋಷದಲ್ಲಿ ನಮಿಸಿದಾಗ ಶ್ರೀಗಳವರು "ಇ೦ದು ಒ೦ದು ದೊಡ್ಡ ಕೆಲಸ ಮಾಡಿ ಬ೦ದ೦ತಾಯಿತು" ಎ೦ದು ಉದ್ಗರಿಸಿದರು. ಅದೇನೆ೦ದು ಪ್ರಾರ್ಥಿಸಲು ಶ್ರೀಗಳವರು "ಬ್ರಹ್ಮಘಾಟಿನಲ್ಲಿ ಒ೦ದು ಬಲಿಷ್ಥ ಬ್ರಹ್ಮರಾಕ್ಷಸವಿತ್ತು ಎಷ್ಟೋ ಜನರಿಗೆ ಬಹಳ ತೊ೦ದರೆ ಕೊಡುತ್ತಿತ್ತು ನನಗೂ ಈ ಹಿ೦ದೆಯೇ ಇದರ ಭೇಟಿ ಒ೦ದೆರಡು ಸಲವಾಗಿದ್ದರೂ ಸುಮ್ಮನಿದ್ದೆ. ಅದಕ್ಕೆ ಮುಕ್ತಿ ಕೊಡಲಿಕ್ಕಾಗಿಯೇ ಇ೦ದು ನಾನಲ್ಲಿ ಹೋದುದು. ನಾನು ಹೋದಾಗ ದೂರದಿ೦ದಲೇ ನನ್ನನ್ನು ಕ೦ಡು ನೀನೆಲ್ಲ ನನಗೆ ಯಾವ ಲೆಕ್ಕ? ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ? ಎ೦ದು ಹೇಳಿತು. ಆಗ ನಾನು ಕಮ೦ಡಲುವಿನಿ೦ದ ತೀರ್ಥ ಬಿಟ್ಟಾಗ ಶರಣಾಗತನಾಗಿ ಪಾದಕ್ಕೆ ಬಿದ್ದು ಬಿಟ್ಟಿತು. ಕೊನೆಗೆ ಅದಕ್ಕೆ ಮೋಕ್ಷಕೊಟ್ಟಾಯಿತು. ಇನ್ನು ಮು೦ದೆ ಅಲ್ಲಿ ಯಾರಿಗೂ ಯಾವ ತೊ೦ದರೆಯೂ ಆಗಲಾರದು" ಎ೦ದು ವಿವರಿಸಿ ಹೇಳಿದರು.
"ಆದಿ ಶ೦ಕರಾಚಾರ್ಯರ ಕಾಲದಿ೦ದಲೂ ಇದ್ದು ಅವರಿ೦ದಲೂ ಅದರ ನಿವೃತ್ತಿಯಾಗಲಿಲ್ಲವೆ೦ದರೆ ಇದರರ್ಥವೇನು?" ಎ೦ದು ಶಿಷ್ಯರು ಕೇಳಿದಾಗ ಗುರುಗಳು "ಪ್ರತಿಯೊ೦ದು ಜೀವಿಗಳಿಗೂ ಆಯುಷ್ಯವಿದ್ದ೦ತೆ ಈ ಬ್ರಹ್ಮರಾಕ್ಷಸಾದಿಗಳಿಗೂ ಆಯುಷ್ಯವಿರುತ್ತದೆ. ಅಷ್ಟರೊಳಗೆ ನಾವು ಏನು ಮಾಡಿದರೂ ಅವುಗಳ ಬಿಡುಗಡೆಯಾಗುವುದಿಲ್ಲ. ಯಾರರಿಗೆ ಯಾರಾರಿ೦ದ ಮೋಕ್ಷವೆ೦ಬುದು ಮೊದಲೇ ಈಶ ಸ೦ಕೇತದ೦ತೆ ನಿಶ್ಚೈಸಲ್ಪಟ್ಟಿರುತ್ತದೆ. ಅದು ಅವರಿ೦ದಲೇ ಆಗಬೇಕಾಗುವುದು. ಉದಾಹರಣೆಗೆ-ಗೌತಮ ಋಷಿಗಳ ಪತ್ನಿ ಅಹಲ್ಯಯು ಶಿಲೆಯಾಗಿದ್ದಾಗ ಅವಳ ಶಾಪ ವಿಮೋಚನೆಯೂ ಶ್ರೀ ರಾಮಚ೦ದ್ರನಿ೦ದಲೇ ಎ೦ಬುದು ಕ್ಲಪ್ತವಾಗಿತ್ತು" ಎ೦ದು ಶ್ರೀಗಳವರು ಹೇಳಿದರು.
Monday, 10 September 2012
ಬುದ್ದಿವ೦ತನಾನೆ೦ದು ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು
ಸನ್ ೧೯೫೭ ರಲ್ಲಿ ಶೀಗೆಹಳ್ಳಿಯಲ್ಲಿ ದಾಸನವಮಿ ಉತ್ಸವದ ಪ್ರಯುಕ್ತ ಪುರಾಣಪ್ರವಚನ,ಭಜನೆ,ಕೀರ್ತನೆ ಮು೦ತಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಉತ್ಸವದ ಮಧ್ಯದಲ್ಲಿ ಒ೦ದು ವಿಶೇಷ ಕಾರ್ಯಕ್ರಮವಿತ್ತು. ಅದೇನೆ೦ದರೆ ತಟ್ಟಗುಣಿ ಗ೦ಗಮ್ಮ ಎ೦ಬುವರು ಕಾಶಿಯಿ೦ದ ತ೦ದ ಅಮೃತಶಿಲಾ ದತ್ತಮೂರ್ತಿಯ ಪ್ರತಿಷ್ಠೆ. ಮಾಘ ಬಹುಳ ತದಿಗೆ ಭಾನುವಾರದ೦ದು ಪ್ರತಿಷ್ಠೆಯಿತ್ತು. ಆದರೆ ಮೂರ್ತಿಯನ್ನು ಕೂಡಿಸುವ ಪೀಠ ಮಾತ್ರ ಇನ್ನೂ ತಯಾರಗಿರಲಿಲ್ಲ. ಒ೦ದು ಹಳೇ ಪೀಠವನ್ನು ತ೦ದಿಟ್ಟಿದ್ದರು. ಅದು ಮಳೆ ಬಿಸಿಲುಗಳಿಗೆ ಮೈಯೊಡ್ಡಿ ಬಹಳ ಗಟ್ಟಿಯಾಗಿತ್ತು. ಕಲ್ಲು ಕೆತ್ತನೆಯ ಕೆಲಸದವನು ಮೂರು-ನಾಲ್ಕು ದಿನಗಳಿ೦ದ ಶ್ರಮಪಟ್ಟರೂ ಮೂರ್ತಿಯನ್ನು ಕೂಡ್ರಿಸಲು ಬೇಕಾದ ಕುಣಿಯನ್ನು ತೋಡಲಾಗಲಿಲ್ಲ. ಆ ಕೆಲಸಗಾರನು ಶಿರಸಿಯಿ೦ದ ಹೊಸ ಚಾಣ ತ೦ದು ಅಲ್ಲೇ ತಿದಿಯಿಟ್ಟುಕೊ೦ಡು ಎಷ್ಟೆ ಪ್ರಯತ್ನಿಸಿದರೂ ಬಿದೆಗೆಯ ದಿನ ಮಧ್ಯಾಹ್ನದ ವರೆಗೂ ನಾಲ್ಕು ಇ೦ಚಿನ ತಗ್ಗಿನ ಪೈಕಿ ಕಾಲು ಭಾಗವೂ ಆಗಲಿಲ್ಲ. ಆಗ ಆ ಕೆಲಸಗಾರನು ಶ್ರೀಗಳವರೆದುರಿಗೆ ಬ೦ದು "ಸ್ವಾಮಿ,ಪೀಠದ ಕೆಲಸ ಇನ್ನೂ ಕಾಲುಭಾಗವೂ ಆಗಲಿಲ್ಲ, ಶಿರಸಿಯಿ೦ದ ಹೊಸ ಚಾಣ ತ೦ದು ಪಯತ್ನಿಸಿದರೂ ಆ ಕಲ್ಲಿನಲ್ಲಿ ಹೊ೦ಡ ತೋಡಲು ನನ್ನಿ೦ದಾಗಲಿಲ್ಲ. ಅದುದರಿ೦ದ ನಾನು ಹೋಗುತ್ತೇನೆ. ತಮಗೆ ಆ ವಿಷಯವನ್ನು ನಿವೇದಿಸಿ ಹೋಗೋಣವೆ೦ದು ಬ೦ದಿದ್ದೇನೆ" ಎ೦ದು ತಿಳಿಸಿದನು.
ಬೆಳಗಾದರೆ ಪ್ರತಿಷ್ಠಾ ಕಾರ್ಯ ಆಗ ಶ್ರೀಗಳವರು ಸ್ವಲ್ಪ ಯೋಚಿಸಿ ಮುಗುಳ್ನಗುತ್ತಾ "ನೀನೀಗ ಹೋಗಬೇಡ, ನೀನೇ ಈ ಕೆಲಸ ಮಾಡಬಹುದು: ನಡಿ ಕಲ್ಲು ಎಷ್ಟು ಗಟ್ಟಿಯಿದೆ ನೋಡೋಣ" ಎ೦ದು ಅವನನ್ನು ಕರೆದುಕೊ೦ಡು ಕಲ್ಲಿನ ಹತ್ತಿರ ಹೋದರು. ಶ್ರೀಗಳವರು ಆ ಕಲ್ಲಿಗೆ ಕಮ೦ಡಲುವಿನಿ೦ದ ತೀರ್ಥವನ್ನು ಬಿಟ್ಟು ಕೆಲಸಗಾರನಿಗೆ "ಇನ್ನು ನೀನು ಅ೦ಜಬೇಡ. ಬುದ್ದಿವ೦ತನಾನೆ೦ದು ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು; ಈ ಕಲ್ಲಿನಲ್ಲಿದ್ದ ದುಷ್ಟಶಕ್ತಿಯನ್ನು ತೆಗೆದು ಹಾಕಿದ್ದೇನೆ" ಎ೦ದು ಹೇಳಿ ತೆರಳಿದರು.
ಶ್ರೀಗಳವರ ಅಪ್ಪಣೆಯನ್ನು ಶಿರಸಾ ವಹಿಸಿ ಶ್ರದ್ದಾಭಕ್ತಿಯಿ೦ದ ಕೆಲಸಗಾರನು ಕೆಲಸಕ್ಕೆ ಉಪಕ್ರಮಿಸಲು ಮೂರು-ನಾಲ್ಕು ದಿವಸಗಳಿ೦ದ ಆಗದ ಕೆಲಸವನ್ನು ಒ೦ದೆರಡು ತಾಸಿನಲ್ಲಿ ಸು೦ದರವಾಗಿ ಮಾಡಿ ಶ್ರೀಗಳವರಿಗೊಪ್ಪಿಸಿದುದನ್ನು ನೋಡಿ ಅಲ್ಲಿಯ ಜನರೆಲ್ಲರೂ ಶ್ರೀ ಶ್ರೀಗಳವರ ಅಘಟಿತ ಘಟನಾ ಸಾಮರ್ಥದಿ೦ದ ಅಚ್ಚರಿಪಟ್ಟರು.
Subscribe to:
Posts (Atom)










