Monday, 2 July 2012


ಮಾತೃ ದೇವೋ ಭವ,      ಪಿತೃ ದೇವೋ ಭವ,      ಆಚಾರ್ಯ ದೇವೋ ಭವ


ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ ಚಕ್ಷುರುನ್ಮೀಲಿತಮ್  ಏನ

 ತಸ್ಮೈ ಶ್ರೀ  ಗುರವೇ ನಮ:


ಜನ್ಮ ಕೊಟ್ಟ ಮಾತಾಪಿತರ, ಅಕ್ಷರಾಭ್ಯಾಸ ಮಾಡಿಸಿದ ಗುರುಗಳ, ಸಮಾಜದ ಅರಿವು

ಮೂಡಿಸಿದ ರಾ.ಸ್ವ.ಸಂಘದ ನೂರಾರು ಜನ ಸಮರ್ಪಿತ ಪ್ರಚಾರಕ ಬಂಧುಗಳ

, ಅಧ್ಯಾತ್ಮದ ದಾರಿಯಲ್ಲಿ ಪ್ರೇರಕರಾದ ಪೂಜ್ಯಶ್ರೀ  ವೀರೇಶಾನಂದ ಸರಸ್ವತೀ,

ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತೀ, ಮಾತಾಜಿ ವಿವೇಕಮಯೀ,ಪೂಜ್ಯ ಬ್ರಹ್ಮಚಾರಿ

ಶ್ರೀ ಸುಧರ್ಮ ಚೈತನ್ಯ, ವೇದಮಾರ್ಗದ ಅರಿವು ಮೂಡಿಸುತ್ತಿರುವ  ಪೂಜ್ಯ

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ,ಪೂಜ್ಯ ಪಂಡಿತ್ ಸುಧಾಕರಚತುರ್ವೇದಿ,

ಅಧ್ಯಾತ್ಮದ ಹಾದಿಯಲ್ಲಿ ಚೈತನ್ಯ ನೀಡುತ್ತಿರುವ  ಬ್ರಹ್ಮೀಭೂತ ಮುಕುಂದೂರು

ಸ್ವಾಮಿಗಳು. ಬ್ರಹ್ಮೀಭೂತ ಪೂಜ್ಯ ವೆಂಕಟಾಚಲಯ್ಯ ಗುರುಗಳು, ನಿತ್ಯವೂ ನನಗೆ

ಮತ್ತು ನನ್ನ ಕುಟುಂಬಕ್ಕೆ ನೆಮ್ಮದಿ ನೀಡುತ್ತಿರುವ ಹೆಸರು ಇಚ್ಛಿಸದ  ನನ್ನ ಈಗಿನ

ಗುರುಗಳ  ಚರಣಾರವಿಂದಗಳಲ್ಲಿ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ

ಅಧ್ಯಾತ್ಮದ ಹಾದಿಯಲ್ಲಿ ಮುಂದೆಸಾಗಲು ಅವರ ಕೃಪಾಶೀರ್ವಾದ ಬೇಡುವೆ.