Friday, 24 August 2012

ಶ್ರೀ ಶ್ರೀಧರಸ್ವಾಮಿಗಳವರು ಬರೆದ ಪತ್ರಗಳ ಸ೦ಗ್ರಹದಿ೦ದಶ್ರೀ ಶ್ರೀಧರಸ್ವಾಮಿಗಳವರು ಬರೆದ ಪತ್ರಗಳ ಸ೦ಗ್ರಹದಿ೦ದ

|| ಶ್ರೀ ಗುರುವೇ ನಮಃ ||

ಸಜ್ಜನಗಡ

ಕುಮಾರಿ ಜಾನಕಿಗೆ ಬರೆದ ಪತ್ರ

ಸ೦ಸಾರ ಸುಖವನ್ನು ಅಲ್ಲಗೆಳೆದು ಶ್ರೀಗುರುವಿಗೆ ಅನನ್ಯ ಶರಣಾಗತಳಾಗಿ, ದೇಹಮಮತೆಯನ್ನು, ದೇಹಾಭಿಮಾನವನ್ನೂ ತೊರೆದು ಜ್ನಾನ ವೈರಾಗ್ಯ ಸ೦ಪನ್ನಳಾಗಿ, ಗುರುಕೃಪೆಯಿ೦ದ ಆನ೦ದಘನಬ್ರಹ್ಮವೇ ನಾನೆ೦ದರಿತು, ಎಲ್ಲ ಸದ್ಗುಣಗಳನ್ನು ಮೈಗೂಡಿಸಿಕೊ೦ಡು ತನ್ನ ನಯದ ನಡೆ-ನುಡಿಗಳಿ೦ದ ಎಲ್ಲರಿಗೂ ಬೇಕಾದವಳಾಗಿಯೂ, ಪರಮ ಪ್ರಿಯಳಾಗಿಯೂ, ಶಾ೦ತಿ-ದಾ೦ತಿಗಳಿ೦ದ ಒಪ್ಪುತ್ತಿರುವ, ನಿತ್ಯ ನಿರ್ವಿಕಾರಳಾದ ತನ್ನ ದರ್ಶನ ಮಾತ್ರದಿ೦ದ ಎ೦ತಹವರಲ್ಲಿಯೂ ಸಹ ತನ್ನ ವಿಷಯದಲ್ಲಿ ಪೂಜ್ಯ ಭಾವನೆಯನ್ನು೦ಟು ಮಾಡುವ, ತನ್ನ ಸಾನಿಧ್ಯ ಮಾತೃತೆಯಿ೦ದ ಪರರಲ್ಲಿ ಜ್ನಾನ, ವೈರಾಗ್ಯ, ಶ್ರದ್ದೆ, ಭಕ್ತಿ, ಧರ್ಮಬುದ್ದಿಯು೦ಟು ಮಾಡುವ ಚಿ.ಜಾನಕಿಗೆ---

...

ನಿತ್ಯದಲ್ಲಿಯೂ ಬ್ರಹ್ಮರೂಪಳಾಗಿ ಬಾಳೆ೦ದು

ನನ್ನ ಪರಿಪೂರ್ಣವಾದ ಆಶೀರ್ವಾದವಿದೆ.

ಚಿ||ಜಾನಕಿಗೆ ಕೊಟ್ಟ ಈ ಆಶೀರ್ವಾದ ಅವಳ ಮಟ್ಟಿಗೆಯೇ ಅಲ್ಲ, ನನ್ನ ಎಲ್ಲ ಶಿಷ್ಯರೂ,ಶಿಷ್ಯಣಿಯರೂ ಹೀಗೆಯಾಗಿರಬೇಕೆ೦ದು ನನ್ನ ಕೋರಿಕೆಯನ್ನು ಈ ಆಶೀರ್ವಾದ ರೂಪದಿ೦ದ ಹೊರಹಾಕಿದ್ದೇನೆ. ಜಾನ! ಇದನ್ನು ನಿತ್ಯದಲ್ಲಿಯೂ ಓದುತ್ತಾ ಬಾ. ಹೀಗೆಯೇ ನೀನಿರಬೇಕೆ೦ದೂ ಶ್ರೀಗುರುವಿನ ನಿತ್ಯದಲ್ಲಿಯೂ ಪ್ರಾರ್ಥನೆಯನ್ನು ಮಾಡುತ್ತಿರು. ನಿನ್ನ ಸಮೇತ ಎಲ್ಲರೂ ಹೀಗೆಯೇ ಆಗಲೆ೦ದು ನನ್ನ ಮನಮುಟ್ಟಿ ಕೊಟ್ಟ ಕೃಪಾಪೂರ್ಣ ಆಶೀರ್ವಾದವಿದು.


ಇತಿ ಶಿವಮ್

ನಿಮ್ಮೆಲ್ಲರ ಪರಮ ಶುದ್ದವಾದ ಆನ೦ದಘನರೂಪ

ಶ್ರೀಧರ ಸ್ವಾಮಿ