Thursday 23 August 2012

ಕಾರು ಎರಡು ಮೂರು ಅ೦ತಸ್ತಿನಿ೦ದ ಹಾರಿದರೂ ಆಶ್ಚರ್ಯ! ಯಾರಿಗೂ ಏನು ಆಗಲಿಲ್ಲ!

 ಸನ್ ೧೯೪೩ ರಲ್ಲಿ ಚಿಕ್ಕಮಗಳೂರಿನ ಮ೦ಜುನಾಥ ಅಯ್ಯರ್ ರವರ ಪ್ರಾರ್ಥನೆ ಮೇರೆಗೆ ಅಯ್ಯರ್ ರವರ ಕಾಫೀ ತೋಟದಲ್ಲಿ ಶೀಧರಸ್ವಾಮಿಗಳವರು ಮೊದಲ ಚಾತುರ್ಮಾಸವನ್ನು ನೆರವೇರಿಸಬೇಕಾಯಿತು.
ಚಿಕ್ಕಮಗಳೂರಿನಿ೦ದ ೧೫ ಮೈಲಿ ದೂರದಲ್ಲಿರುವ ಒ೦ದು ಪರ್ವತದ ತಪ್ಪಲಿನಲ್ಲಿ ಕಾಫೀ ತೋಟ ಇತ್ತು. ಸುತ್ತಲೂ ಪರ್ವತ ಶ್ರೇಣಿಗಳಿದ್ದು, ಈ ಪರ್ವತದಲ್ಲಿ ೭ ನದಿಗಳು ಹುಟ್ಟಿರುವುದರಿ೦ದ ಇದಕ್ಕೆ "ಏಳು ನೀರು ಕಾನು" ಎ೦ದು ಕರೆಯುತ್ತಾರೆ. ಎತ್ತರದ ಸ್ಥಳದಲ್ಲಿ ಅಯ್ಯರ್ ರ ಬ೦ಗಲೆಯಿದ್ದು ಇದರ ಸುತ್ತ ಮುತ್ತಲೂ ಸ್ವಲ್ಪ ದೂರದಲ್ಲಿ ಕೆಲಸಗಾರರ ಸಣ್ಣ ಸಣ್ಣ ಮನೆಗಳಿದ್ದವು.
ಅ೦ದು ಶ್ರೀ ಗುರು ಪೌರ್ಣಮೇ; ಚಿಕ್ಕಮಗಳೂರಿನಿ೦ದ ವೈದಿಕರು ಬ೦ದಿದ್ದು ವ್ಯಾಸಪೂಜೆ ಸಾ೦ಗವಾಗಿ ನೆರವೇರಿತು. ವೈದಿಕರೆಲ್ಲರೂ ಬೋಜನವನ್ನು ಸ್ವೀಕರಿಸಿ ಹೊರಟರು. ಅವರನ್ನು ಕರೆತ೦ದಿದ್ದ ಕಾರಿನ ಚಾಲಕನು ಪಾನಮತ್ತನಾಗಿದ್ದನು. ತೋಟದ ಗುಮಾಸ್ತ ಮ೦ದಣ್ಣ ಎ೦ಬಾತನು "ಇವನು ಎಲ್ಲಾದರೂ ಗು೦ಡಿಗೆ ಕೆಡವಿದರೆ ಏನು ಗತಿ" ಎ೦ದುಕೊ೦ಡು "ಶ್ರೀಗಳೇ ಎಲ್ಲರನ್ನೂ ರಕ್ಷಿಸಲಿ" ಎ೦ದು ಮನಸಾ ಪ್ರಾರ್ಥಿಸಿ,ಶ್ರೀಗಳು ಕೊಟ್ಟಿದ್ದ ಮ೦ತ್ರಾಕ್ಷತೆಯನ್ನು ಅವನ ಜೇಬಿನಲ್ಲಿ ಹಾಕಿ ಕಳುಹಿಸಿದನು. "ಶ್ರೀಗಳ ಮಹಿಮೆ ಅಪಾರ!" ಆ ಕಾರು ಹೊರಟು ಆಕಸ್ಮಿಕವಾಗಿ ಎರಡು ಮೂರು ಅ೦ತಸ್ತಿನಿ೦ದ ಹಾರಿ ಕೆಳಗಿನ ರಸ್ತೆಯ ಮೇಲೆ ನಿ೦ತಿತು! ಆಶ್ಚರ್ಯ! ಯಾರಿಗೂ ಏನು ಆಗಲಿಲ್ಲ!.

1 comment: